ಪಂಜ: ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ ಪಂಜ ಶಾಖೆಯ ಉದ್ಘಾಟನೆ ನ.1 ರಂದು ಪಂಜ ಮುಖ್ಯ ರಸ್ತೆಯ ಕಮಿಲ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.ಹಿರಿಯರಾದ ಡಾ.ರಾಮಯ್ಯ ಭಟ್ ದೀಪ ಬೆಳಗಿ ಉದ್ಘಾಟಿಸಿ ಶುಭ ಹಾರಿಸಿದರು. ದ.ಕ.ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ ಸಲಹಾ ಸಮಿತಿ ಸದಸ್ಯ ನಿತ್ಯಾನಂದ ಮುಂಡೋಡಿ, ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡ ಮುಖ್ಯ
ಅತಿಥಿಯಾಗಿದ್ದರು. ದ.ಕ.ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ ಸಭಾಧ್ಯಕ್ಷತೆ ವಹಿಸಿದ್ದರು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ಜಳಕದಹೊಳೆ, ಸಂಸ್ಥೆಯ ನಿರ್ದೇಶಕ ಗಿರಿಧರ ಎಸ್, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೆಂಗು ಕೊಯ್ಲುಗಾರಿಗೆ ಉಚಿತ ವಿಮಾ ನೋಂದಾವಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಇದೇ ವೇಳೆ ಸಂಸ್ಥೆಯ ಪ್ರಚಾರ ಚಿತ್ರವನ್ನು ಅನೇಕ ಬಸ್ ತಂಗುದಾಣದಲ್ಲಿ ಬಿಡಿಸಿದ್ದು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಸಿಬ್ಬಂದಿ ದಿನೇಶ್ ಅವರನ್ನು ಗೌರವಿಸಲಾಯಿತು. ಕಾವ್ಯ ಎಮ್ ಪ್ರಾರ್ಥಿಸಿದರು. ಗಿರಿಧರ ಎಸ್
ಸ್ವಾಗತಿಸಿದರು. ಚೇತನ್ ಎ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಯೋಜನೆಯನ್ನು ನವ್ಯಶ್ರೀ ಅಮೈ ತಿಳಿಸಿದರು.ಸೌಮ್ಯ ಪಿ ಬಿ ನಿರೂಪಿಸಿದರು. ಪೂಜಾ ಪಿ ಹೆಚ್ ವಂದಿಸಿದರು.









