ಸುಳ್ಯ:ಕುಕ್ಕುಜಡ್ಕದ ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಚೊಕ್ಕಾಡಿ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲ ನಟಡಯುತ್ತಿರುವ ಸಾಂಸ್ಕೃತಿಕ ಸಂಭ್ರಮ ಜನ ಮನ ಸೆಳೆದಿದೆ.
ಕ.12ರಂದು ಅಂಗನವಾಡಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಚೊಕ್ಕಾಡಿ ಆಂಗ್ಲಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ
ಸಾಂಸ್ಕೃತಿಕ ಕಾರ್ಯಕ್ರಮ ನಢಯಿತು ರಾತ್ರಿ ‘ಮಾತನಾಡುವ ಚಿಂಟು’ ವಿಶೇಷ ಕಾರ್ಯಕ್ರಮ ಹಾಗೂ
ಕಿರು ಪ್ರಹಸನ ನಡೆಯಿತು. ರಾತ್ರಿ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯಿಸಿದ ‘ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ತುಳು ಪೌರಾಣಿಕ ಮತ್ತು ಸಾಮಾಜಿಕ ನಾಟಕ ನಡೆಯಿತು.
ಜ.13ರಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಕುಕ್ಕುಜಡ್ಕ ಹಾಗೂ ಶೇಣಿ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಚೊಕ್ಕಾಡಿ ಪ್ರೌಢಶಾಲಾ ಮತ್ತು

ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಅಮರಪಡ್ನೂರು ಅಜ್ಜನಗದ್ದೆ ಸ.ಉ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಂದ “ನೃತ್ಯ ಪ್ರದರ್ಶನ “, ಮತ್ತು ‘ಚಂದ್ರಹಾಸ’ ನಾಟಕ, ರಾತ್ರಿ ಮಹಿಳಾ ನೃತ್ಯ ” ಶ್ಲೋಕಾಪರ್ಣಂ”, ಕಿರುಪ್ರಹಸನ ಮತ್ತು ಜನಪದ ನೃತ್ಯ, ಪ್ರದರ್ಶನ ನಡೆಯಿತು. ರಾತ್ರಿ ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹಟ್ಟಿಯಂಗಡಿ ಮೇಳದವರಿಂದ “ಚಂದ್ರಾವಳಿ ವಿಲಾಸ – ರಾಜಾ ರುದ್ರಕೋಪ” ಯಕ್ಷಗಾನ ಬಯಲಾಟ ನಡೆಯಿತು.









