ನವದೆಹಲಿ: ಟೆಸ್ಟ್ ಪರಿಣತ ಬ್ಯಾಟರ್ ಚೇತೇಶ್ವರ ಪೂಜಾರ ಅವರು ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.’ಭಾರತದ ಜೆರ್ಸಿ ಧರಿಸುವುದು, ರಾಷ್ಟ್ರಗೀತೆ ಹಾಡುವುದು ಮತ್ತು ಪ್ರತಿ ಬಾರಿ ಮೈದಾನಕ್ಕೆ ಕಾಲಿಟ್ಟಾಗಲೂ ಸಾಧ್ಯವಾದಷ್ಟು ಪ್ರಯತ್ನ ಮಾಡುವಾಗ ಮೂಡುವ ಭಾವನೆಗಳನ್ನು
ಪದಗಳಲ್ಲಿ ವ್ಯಕ್ತಪಡಿಸುವುದು ಅಸಾಧ್ಯ’ ಎಂದು ಬರೆದುಕೊಂಡಿದ್ದಾರೆ.ಎಲ್ಲಕ್ಕೂ ಕೊನೆಯಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಅಪಾರ ಕೃತಜ್ಞತೆಗಳೊಂದಿಗೆ ಭಾರತೀಯ ಕ್ರಿಕೆಟ್ನ ಎಲ್ಲ ಮಾದರಿಯ ನಿವೃತ್ತಿಹೊಂದಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದ್ದಾರೆ. ಹಾಗೆಯೇ ವೃತ್ತಿಜೀವನದುದ್ದಕ್ಕೂ ತಮ್ಮನ್ನು ಬೆಂಬಲಿಸಿದ, ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದಗಳನ್ನೂ ತಿಳಿಸಿದ್ದಾರೆ. 37 ವರ್ಷ ವಯಸ್ಸಿನ ಪೂಜಾರ ಭಾರತದ ಪರ 103 ಟೆಸ್ಟ್ ಆಡಿರುವ ಪೂಜಾರ 19 ಶತಕ, 35 ಅರ್ಧ ಶತಕ ಸೇರಿ 7,195 ರನ್ ಗಳಿಸಿದ್ದಾರೆ. 5 ಏಕದಿನ ಪಂದ್ಯ ಆಡಿದ್ದಾರೆ. 278 ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 66 ಶತಕ ಸೇರಿ ಒಟ್ಟು 21,301 ರನ್ ಬಾರಿಸಿದ್ದಾರೆ.












