ಸುಳ್ಯ:ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ (ಆರ್) ವತಿಯಿಂದ ಆಯೋಜಿಸಿದ ಪಿ ಟಿ ಸಿ ಎ ಟ್ರೋಫಿ ಓಪನ್ ರಾಪಿಡ್ ಚೆಸ್ ಸ್ಪರ್ಧೆಯಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಯು ಕೆ ಜಿ ಯ ವಿದ್ಯಾರ್ಥಿನಿ ಲಹರಿ. ರಾವ್ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮಂಗಳೂರಿನಲ್ಲಿ
28ನೇ ಆರ್ ಸಿ ಸಿ ಅಂತರಾಷ್ಟ್ರೀಯ ಫಿಡೆ ರೇಟೆಡ್ ರಾಪಿಡ್ ಕಪ್ ಆಯೋಜಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿ ಯಂಗೆಸ್ಟ್ ಪ್ಲೇಯರ್ ‘ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಹರಿಪ್ರಸಾದ್ ಕೊಯಿಂಗಾಜೆ ತರಬೇತಿ ನೀಡುತ್ತಾರೆ.ಇವರು ಅರಂತೋಡಿನ ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿ ರಾಜಾರಾಮ್ ಮತ್ತು ಕೆವಿಜಿ ಐಪಿಎಸ್ನ ಶಿಕ್ಷಕಿ ಸೌಮ್ಯ ಕೆ ಇವರ ಪುತ್ರಿ. ಇವರಿಗೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ, ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಅಭಿನಂದನೆ ಸಲ್ಲಿಸಿದರು.





