ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಸೋಲಿಸಿತು.ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತ ತಂಡ 20 ಓವರ್ನಲ್ಲಿ 9 ವಿಕೆಟ್ಗೆ 137 ರನ್ಗಳ ಅಲ್ಪ ಮೊತ್ತ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಆತಿಥೇಯರು
14 ಎಸೆತ ಬಾಕಿ ಇರುವಂತೆ ಮೂರು ವಿಕೆಟ್ ನಷ್ಟದಲ್ಲಿ 141 ರನ್ ಗಳಿಸಿದರು. ನಾಯಕ ಋತುರಾಜ್ ಗಾಯಕವಾಡ್ 58 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ ಔಟಾಗದೇ 67 ರನ್ ಬಾರಿಸಿದರು. ಶಿವಂ ದುಬೆ 18 ಎಸೆತಗಳಲ್ಲಿ 3 ಸಿಕ್ಸರ್ ಸಮೇತ 28 ರನ್, ಡೇರಿಲ್ ಮಿಚೆಲ್ 25 ರನ್ ಬಾರಿಸಿದರು. ಚೆನ್ನೈ ಸ್ಪಿನ್ ಮತ್ತು ವೇಗದ ಬೌಲರ್ಗಳ ಉತ್ತಮ ದಾಳಿಯ ನೆರವಿನಿಂದ ಕೆಕೆಆರ್ನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿತು.
ರವೀಂದ್ರ ಜಡೇಜ (18ಕ್ಕೆ3) ತುಷಾರ್ ದೇಶಪಾಂಡೆ (33ಕ್ಕೆ 3) ಮತ್ತು ಮುಸ್ತಫಿಜುರ್ ರೆಹಮಾನ್ (22ಕ್ಕೆ 2) ಅವರು ಕೋಲ್ಕತ್ತ ದೊಡ್ಡ ಮೊತ್ತ ಗಳಿಸದಂತೆ ತಡೆಹಾಕಿದರು.ರವೀಂದ್ರ ಜಡೇಜ ಎಂಟು ಎಸೆತಗಳ ಅಂತರದಲ್ಲಿ ಮೂರು ಪ್ರಮುಖ ವಿಕೆಟ್ಗಳನ್ನು ಪಡೆದು ಕೋಲ್ಕತ್ತ ನೈಟ್ ರೈಡರ್ಸ್ಗೆ ಬಲವಾದ ಪೆಟ್ಟು ನೀಡಿದ್ದರು. ಕೆಕೆಆರ್ ಪರ ಸುನಿಲ್ ನಾರಾಯಣ್ (27, 20ಎ) ಮತ್ತು ನವತಾರೆ ಅಂಗ್ಕ್ರಿಶ್ ರಘುವಂಶಿ (24, 18ಎ) ನಾಯಕ ಶ್ರೇಯಸ್ ಅಯ್ಯರ್ ಅವರು 34 (32ಎ, 4×3) ರನ್ ಗಳಿಸಿದರು.