ಬೆಂಗಳೂರು: ಚಂದ್ರಯಾನ 3ಯ ಪ್ರಗ್ಯಾನ್ ರೋವರ್ ತನ್ನ ಸಂಶೋಧನೆ ಆರಂಭಿಸಿದ್ದು, ಮಾಹಿತಿಯನ್ನು ರವಾನಿಸಿದೆ.ಚಂದ್ರನ ಮೇಲೆ ಅಧ್ಯಯನ ನಡೆಸುತ್ತಿರುವ ಪ್ರಗ್ಯಾನ್ ರೋವರ್ ಇದೀಗ ತಾಪಮಾನ ಮಾಹಿತಿಯನ್ನು ಇಸ್ರೋಗೆ ಕಳುಹಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಚಂದ್ರನ ಮೇಲಿರುವ ತಾಪಮಾನದ ಮಾಹಿತಿ ಬಹಿರಂಗಗೊಂಡಿದೆ.
ಚಂದ್ರನ ಮೇಲಿರುವ ಚೇಷ್ಟ್ ಪ್ಲೇಲೋಡ್ ವಿಕ್ರಮ್ ಲ್ಯಾಂಡರ್
ಸಹಾಯದಿಂದ ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲಿನ ತಾಪಮಾನ ಎಷ್ಟಿದೆ ಇದು ಯಾವ ರೀತಿ ಬದಲಾಗುತ್ತಿದೆ ಎಂಬುದರ ಮಾಹಿತಿಯನ್ನು ಬಹಿರಂಗಪಡಿಸಿದೆ. ಪ್ರಗ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿರುವ ಮಣ್ಣಿನ ಕುರಿತು ಅಧ್ಯಯನ ಆರಂಭಿಸಿದೆ. ವಿಕ್ರಮ್ ಲ್ಯಾಂಡರ್ನಲ್ಲಿ ಅಳವಡಿಸಿರುವ ಸೆನ್ಸಾರ್ಗಳು ದಕ್ಷಿಣ ಧ್ರುವದಲ್ಲಿನ ತಾಪಮಾನದ ಮಾಹಿತಿಯನ್ನು ರವಾನಿಸಿದೆ. ಚಂದ್ರನ ಮೇಲಿನ ಉಷ್ಣತೆ ಪ್ರಮಾಣ ತಿಳಿಯುವ ಹಲವು ದೇಶಗಳ ವಿಜ್ಞಾನಿಗಳ ಕುತೂಹಲಕ್ಕೆ ಇಸ್ರೋ ಉತ್ತರ ನೀಡಿದೆ. ವಿಕ್ರಮ್ ಲ್ಯಾಂಡರ್ ಸಹಾಯದಿಂದ ಚಂದ್ರನ ಮೇಲ್ಮಣ್ಣಿನ ತಾಪಮಾನ ಅಳೆದು ಮಾಹಿತಿ ನೀಡಿದೆ. ಈ ಕುರಿತು ಇಸ್ರೋ ಗ್ರಾಫ್ ಬಿಡುಗಡೆ ಮಾಡಿದೆ.