ಬೆಂಗಳೂರು: ಇಂದು ಚಂದ್ರಯಾನ-3 ಯೋಜನೆಯಲ್ಲಿ ಮಹತ್ತರ ಬೆಳವಣಿಗೆ ನಡೆದಿದ್ದು ನೌಕೆಯಿಂದ ಲ್ಯಾಂಡರ್ ಮಾಡ್ಯೂಲ್ ಬೇರ್ಪಟ್ಟಿದೆ. ಪ್ರತೀ ಕ್ಷಣವೂ ಚಂದ್ರನಿಗೆ ಹತ್ತಿರವಾಗುತ್ತಿರುವ ಇಸ್ರೋ ನೌಕೆಯಿಂದ ಇಂದು ಲ್ಯಾಂಡರ್ ಮಾಡ್ಯೂಲ್ ಬೇರ್ಪಡುವುದು ಯೋಜನೆಯ ಮಹತ್ವದ ಭಾಗವಾಗಿದೆ. ಅಂತಿಮ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿದ
ಚಂದ್ರಯಾನ-3 ನೌಕೆಯಿಂದ ಇಂದು ಲ್ಯಾಂಡರ್ ಬೇರ್ಪಡಿಸುವ ಪ್ರಕ್ರಿಯೆ ಸುಮಾರು 1 ಗಂಟೆಗೆ ನಡೆದಿದೆ. ಮುಂದಿನ ವಾರದಲ್ಲಿ ವಿಕ್ರಮ್ ಲ್ಯಾಂಡರ್ನ ಸಾಫ್ಟ್ ಲ್ಯಾಂಡಿಂಗ್ ಆಗಬೇಕೆಂದಲ್ಲಿ ಲ್ಯಾಂಡರ್ ಸರಿಯಾಗಿ ಬೇರ್ಪಡುವುದು ಮಹತ್ವ ಪೂರ್ಣ ಘಟ್ಟವಾಗಿತ್ತು. ಆಗಸ್ಟ್ 23ರಂದು ಚಂದ್ರಯಾನ -3ನ ಅಂತಿಮ ಸಕ್ಸಸ್ ಚಿತ್ರಣ ಗೊತ್ತಾಗಲಿದೆ.
ಚಂದ್ರಯಾನ-3ರ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಧ್ರುವ ಪ್ರದೇಶದಲ್ಲಿ ಇಳಿಯುವುದನ್ನು ಕಾಯುತ್ತಿದೆ. ಲ್ಯಾಂಡರ್ ಬೇರ್ಪಡುವ ಪ್ರಕ್ರಿಯೆ ಯಶಸ್ವಿ ಆಗಿ ಪೂರ್ಣಗೊಳ್ಳುತ್ತಿದ್ದಂತೆಯೇ ಇಸ್ರೋ ಕೂಡ ಟ್ವೀಟ್ ಮಾಡಿದ್ದು “ವಿಕ್ರಮ್ ಲ್ಯಾಂಡರ್, ಇಸ್ರೋ ನೌಕೆಗೆ ಯಾತ್ರೆ ಮಾಡಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದೆ” ಎಂದು ಹೇಳಿದೆ.