ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಚಂದ್ರಯಾನ–3 ಮಿಷನ್ ನಿಗದಿಯಂತೆ ಸಾಗಿದೆ. ವಿಕ್ರಂ ಲ್ಯಾಂಡರ್ ಸಾಗುವುದು ಸುಸೂತ್ರವಾಗಿ ಮುಂದುವರೆದಿದೆ ಎಂದು ಇಸ್ರೊ ಮಾಹಿತಿ ನೀಡಿದೆ. ನಾಳೆ ಅಂದ್ರೆ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಂ ಲ್ಯಾಂಡರ್ ಅನ್ನು
ಸೇಫಾಗಿ ಲ್ಯಾಂಡ್ ಮಾಡುವ ನಿರೀಕ್ಷೆಯಲ್ಲಿದೆ ಎಂದು ಇಸ್ರೊ ಎಕ್ಸ್( ಟ್ವಿಟ್ಟರ್) ಮೂಲಕ ಮಾಹಿತಿ ನೀಡಿದೆ. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮರಾ(ಎಲ್ಪಿಡಿಸಿ)ದಿಂದ ಆ. 19ರಂದು ಚಂದ್ರನಿಂದ ಸುಮಾರು 70 ಕಿ.ಮೀ. ದೂರದಲ್ಲಿ ತೆಗೆದ ಫೋಟೋಗಳನ್ನು ಇಸ್ರೊ ಹಂಚಿಕೊಂಡಿದೆ. ಎಲ್ಪಿಡಿಸಿ ಚಿತ್ರಗಳು ಲ್ಯಾಂಡರ್ ಮಾಡ್ಯೂಲ್ಗೆ ಅಕ್ಷಾಂಶ-ರೇಖಾಂಶ ಅನುಸಾರ ತನ್ನ ಸ್ಥಾನ ಹೊಂದಿಸಲು ಸಹಾಯ ಮಾಡುತ್ತಿದೆ ಎಂದೂ ಇಸ್ರೋ ತಿಳಿಸಿದೆ.