ಸುಳ್ಯ:ಪದ್ಮನಾಭನ್ ನಾಯರ್ ಮಧುವನ ಅವರು ರಚಿಸಿದ ‘ಚಂದನ ತರು’ ಕೃತಿ ಬಿಡುಗಡೆ ಕಾರ್ಯಕ್ರಮ ಸಂಧ್ಯಾರಶ್ಮಿ ಸಭಾ ಭವನದಲ್ಲಿ ನಡೆಯಿತು.ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರಧ್ವಾಜವರು ಕೃತಿ ಬಿಡುಗಡೆ ಮಾಡಿ ಶುಭ ಹಾರೈಸಿದರು.ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ.ಕಮಲಾಕ್ಷ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ ಕೃತಿಗಳನ್ನು
ರಚನಾ ಕೌಶಲ್ಯದಿಂದ ಬರೆಯುವ ಸಾಮರ್ಥ್ಯ ಗಳಿಸಬೇಕು.ಅದಕ್ಕೆ ಹೆಚ್ಚು ಹೆಚ್ಚು ಓದಬೇಕು.ಸುಮ್ಮನೆ ಓದಿದರೆ ಸಾಲದು, ಅದರಲ್ಲಿ ವಿಷಯಗಳನ್ನು ಯಾವ ರೀತಿ ಪರಿಚಯಿಸಿದ್ದಾರೆ. ಅಥವಾ ರೂಪಿಸಿದ್ದಾರೆ. ಎಂಬುದನ್ನು ಗಮನಿಸುತ್ತಾ ಆಸ್ವಾದಿಸುತ್ತಾ ಓದಬೇಕು ಆಗ ಮಾತ್ರ ಭಾಷೆಯ ಮೇಲೆ ಹಿಡಿತ ಬರುತ್ತದೆ ಎಂದರು.
ಸಿ.ಎ. ಗಣೇಶ್ ಭಟ್. ಪಿ . ‘ಚಂದನ ತರು’ ಕೃತಿಯ ವಿಮರ್ಶೆ ಮಾಡಿದರು.ಎಂ.ಬಿ.ಸದಾಶಿವ ಶುಭ ಹಾರೈಸಿದರು.ನಾಯರ್ ಸರ್ವಿಸ್ ಸೊಸೈಟಿ, ಸುಳ್ಯ ಶಾಖೆ ವತಿಯಿಂದ ಪದ್ಮನಾಭ ನಾಯರ್ ಅವರನ್ನು ಸನ್ಮಾನಿಸಲಾಯಿತು.ಪದ್ಮನಾಭನ್ ನಾಯರ್ ಸ್ವಾಗತಿಸಿದರು.ಸಂಧ್ಯಾ ರಶ್ಮಿ ಸಾಹಿತ್ಯ ಸಂಘದ ಮಾಜಿ ಅಧ್ಯಕ್ಷೆ ಲೀಲಾ ದಾಮೋದರ ವಂದಿಸಿದರು.








