ಸುಳ್ಯ:ಸುಳ್ಯ ಸಿ ಎ ಬ್ಯಾಂಕ್ ಆಂತರಿಕ ಲೆಕ್ಕಪರಿಶೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ರಸಾದ್ ಎಸ್ ಇವರ ನಿವೃತ್ತಿ ಪ್ರಯುಕ್ತ ಬೀಳ್ಕೊಡುಗೆ ಕಾರ್ಯಕ್ರಮ ಸುಳ್ಯ ಸಿ ಎ ಬ್ಯಾಂಕ್ನ ಎ ಎಸ್ ವಿಜಯಕುಮಾರ್ ಸಭಾಭವನದಲ್ಲಿ ನಡೆಯಿತು. ಶಿವಪ್ರಸಾದ್ ಎಸ್ ಇವರು 1991 ರಲ್ಲಿ ಸಿ ಎ ಬ್ಯಾಂಕ್ ನಲ್ಲಿ ಗುಮಾಸ್ತನಾಗಿ ಸೇರ್ಪಡೆಗೊಂಡು ಆಂತರಿಕ ಲೆಕ್ಕ ಪರಿಶೋಧಕ ಹುದ್ದೆಯವರೆಗೆ
ವಿವಿಧ ಹುದ್ದೆಗಳನ್ನು ನಿಭಾಯಿಸಿ 33 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ಜೂ.29ರಂದು ನಿವೃತ್ತರಾದರು. ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಎ ವಿ, ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರುಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಪುತ್ಯ, ಸಿ.ಎ.ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ಬಾಲಗೋಪಾಲ ಎಂ, ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿಗಳು ಉಪಸ್ತಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಸೂರ್ತಿಲ ಸ್ವಾಗತಿಸಿ ಪ್ರಸ್ತಾವನೆಗೈದರು. ಹೇಮಂತ್ ಕುಮಾರ್ ಕಂದಡ್ಕ ವಂದಿಸಿದರು.