ಸುಳ್ಯ:ಅಡಿಕೆ ಬೆಳೆಗಾರರ ಅಂತಾರಾಜ್ಯ ಸಹಕಾರ ಸಂಸ್ಥೆ ‘ಕ್ಯಾಂಪ್ಕೋ’ ಆಡಳಿತ ಮಂಡಳಿಗೆ ನ.23ರಂದು ನಡೆದ ಚುನಾವಣೆಯಲ್ಲಿ ಶೇ.45.53 ಮತದಾನವಾಗಿದೆ. 5,651 ಅರ್ಹ ಮತದಾರರ ಪೈಕಿ 2,573 ಮಂದಿ ಮತದಾನ ಮಾಡಿದ್ದಾರೆ. ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಚುನಾವಣೆ ನಡೆಯಿತು. ಮತ ಎಣಿಕೆ ಕಾರ್ಯ
ನ.25ರಂದು ನಡೆಯಲಿದೆ. ಚುನಾವಣಾ ಫಲಿತಾಂಶದ ಅಧಿಕೃತ ಘೋಷಣೆ ನ.28ರಂದು ನಡೆಯಲಿದೆ.ಕ್ಯಾಂಪ್ಕೋ ಆಡಳಿತ ಮಂಡಳಿಯ 19 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ ಆರು ಸಾಮಾನ್ಯ ಸ್ಥಾನಗಳಿಗೆ 8 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾದ ದಯಾನಂದ ಹೆಗ್ಡೆ, ಮಹೇಶ ಚೌಟ, ಮುರಳಿಕೃಷ್ಣ ಕೆ.ಎನ್, ಪುರುಷೋತ್ತಮ ಭಟ್, ಸತೀಶ್ಚಂದ್ರ ಎಸ್.ಆರ್ ಹಾಗೂ ತೀರ್ಥರಾಮ ಎ ವಿ, ಸ್ವತಂತ್ರ ಅಭ್ಯರ್ಥಿಗಳಾದ ರಾಮಪ್ರತೀಕ್ ಮತ್ತು ಎಂ.ಜಿ.ಸತ್ಯನಾರಾಯಣ ಚುನಾವಣಾ ಕಣದಲ್ಲಿದ್ದಾರೆ.
ಕರ್ನಾಟಕ ರಾಜ್ಯದ 10 ಹಾಗೂ ಕೇರಳ ರಾಜ್ಯದ ಒಂಬತ್ತು ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು.ಕೇರಳ ಎಲ್ಲಾ ಒಂಬತ್ತು ಹಾಗೂ ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.ಕರ್ನಾಟಕದಿಂದ ಮಾಲಿನಿಪ್ರಸಾದ್, ಗಣೇಶ್, ರಾಘವೇಂದ್ರ ಎಂ.ಎಚ್ ಮತ್ತು ವಿಶ್ವನಾಥ ಈಶ್ವರ ಹೆಗಡೆ, ಕೇರಳದಿಂದ ಸೌಮ್ಯ, ಸತೀಶ್ಚಂದ್ರ ಭಂಡಾರಿ, ಸದಾನಂದ ಶೆಟ್ಟಿ, ವಿವೇಕಾನಂದ ಗೌಡ, ಸತ್ಯನಾರಾಯಣ ಪ್ರಸಾದ್, ರಾಧಾಕೃಷ್ಣ, ಗಣೇಶ್ ಕುಮಾರ್, ವೆಂಕಟ್ರಮಣ ಭಟ್ ಹಾಗೂ ಪದ್ಮರಾಜ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.













