ಸುಳ್ಯ:ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಸುಳ್ಯ ತಾಲೂಕಿನಲ್ಲಿ ಜನ ಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕೆಎಸ್ಆರ್ಟಿಸಿ ಬಸ್ ಗಳು ಸೇರಿ ಇತರ ವಾಹನಗಳು ಎಂದಿನಂತೆ ಓಡಾಟ ನಡೆಸುತ್ತಿದೆ. ಅಂಗಡಿ ಮುಂಗಟ್ಟುಗಳು, ಶಾಲಾ
ಕಾಲೇಜುಗಳು ತೆರೆದು ಕಾರ್ಯಾಚರಿಸುತಿವೆ. ಜನ ಸಂಚಾರ ಎಂದಿನಂತೆ ಇದೆ. ಬೆಂಗಳೂರು, ಮೈಸೂರು ಕಡೆಯಿಂದ ಕೆಎಸ್ಆರ್ಟಿಸಿ ಬಸ್ಗಳು ಸುಳ್ಯಕ್ಕೆ ಬಂದಿಲ್ಲ. ಸುಳ್ಯದಿಂದ ಮಡಿಕೇರಿ ತನಕ ಬಸ್ಗಳು ಓಡಾಡುತ್ತಿವೆ. ಸುಳ್ಯ ತಾಲೂಕಿನಲ್ಲಿ ಹಾಗೂ ಜಿಲ್ಲೆಯಾದ್ಯಂತ ಎಲ್ಲೆಡೆ ಎಂದಿನಂತೆ ಬಸ್ ಓಡಾಡುತಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಜನ ಜೀವನದ ಮೇಲೆ ಬಂದ್ ಪರಿಣಾಮ ಬೀರಿಲ್ಲ. ಜನಜೀವನ ಸಹಜವಾಗಿದೆ.ಬಂದ್ ನಿಂದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಂಪೂರ್ಣ ಬಂದ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ ಗಳು, ವಾಹನಗಳು ಎಂದಿನಂತೆ ಓಡಾಟ ನಡೆಸುತ್ತಿದೆ. ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳು ತೆರೆದು ಕಾರ್ಯಾಚರಿಸುತಿವೆ.
ಚಿತ್ರಗಳು: ಗಿರೀಶ್ ಅಡ್ಪಂಗಾಯ