ಬೆಂಗಳೂರು:ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಾಲಯಗಳ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಸಿದ್ದರಾಮಯ್ಯ ಅವರು ಇಂದು ದಾಖಲೆಯ 17ನೇ ಬಜೆಟ್ ಮಂಡಿಸಿದರು.
ಮಾತಾ ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ
ತಲಾ 5,000 ಸಹಾಯಧನ ನೀಡುವುದಾಗಿ ಅವರು ಹೇಳಿದರು.
ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಒಳಪಟ್ಟಿರುವ 259 ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಲು ‘ಜಲ ನಿಧಿ ಕಲ್ಯಾಣಿಗಳ ಪುನಃಶ್ಚೇತನ ಯೋಜನೆ’ ಜಾರಿ ಮಾಡುವುದಾಗಿ ತಿಳಿಸಿದರು.
ವಾರಣಾಸಿಯಲ್ಲಿ ಹೊಸ ಛತ್ರ ನಿರ್ಮಾಣ, ಶ್ರೀಶೈಲಂನಲ್ಲಿ ಹೊಸ ಯಾತ್ರಿ ನಿವಾಸ ನಿರ್ಮಾಣ, ತುಳಜಾಪುರದಲ್ಲಿ ಹೊಸ ಛತ್ರ ನಿರ್ಮಾಣ ಮತ್ತು ಮಂತ್ರಾಲಯದ ಶಿಥಿಲಗೊಂಡ ಛತ್ರದ ನವೀಕರಣ ಮಾಡುವುದಾಗಿ ಹೇಳಿದರು.10 ಕೋಟಿ ರೂ.ಗಳ ವೆಚ್ಚದಲ್ಲಿ 50 ಸರ್ಕಾರಿ ಕಾಲೇಜುಗಳಲ್ಲಿ ಆಧುನಿಕ ಎಐ ಪ್ರಯೋಗಾಲಯಗಳ
ಪ್ರಾರಂಭ ವಿಶ್ವಬ್ಯಾಂಕ್ ನೆರವಿನಿಂದ ಒಟ್ಟು 5,000 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣ ಮತ್ತು ವಿಪತ್ತು ನಿರ್ವಹಣೆ ಕಾಮಗಾರಿ ಕಾವೇರಿ 3.0 ತಂತ್ರಾಂಶದ ಅಭಿವೃದ್ಧಿ:65 ಕೋಟಿ ರೂ.ಗಳ ವೆಚ್ಚದಲ್ಲಿ ಕಾವೇರಿ 3.0 ತಂತ್ರಾಂಶದ ಅಭಿವೃದ್ಧಿ ಮೂಲಕ ಕಾಗದರಹಿತ ನೋಂದಣಿ ಪ್ರಕ್ರಿಯೆಗೆ ಚಾಲನೆ, ಡಿಜಿಟಲ್ ಇ-ಸ್ಟ್ಯಾಂಪಿಂಗ್ ಮತ್ತು ಸಂಪೂರ್ಣ ಕಾಗದರಹಿತ ನೋಂದಣಿಗಾಗಿ ನವೀನ ಫ್ಲಾಟ್ಫಾರ್ಮ್ ಅಭಿವೃದ್ಧಿ.ಹೊಸದಾಗಿ ಸರ್ಕಾರಿ ಸೇವೆಗೆ ಸೇರಿದ ನೌಕರರ ವೇತನ ಪ್ರಕ್ರಿಯೆಯನ್ನು ಒಂದು ವಾರದೊಳಗೆ ಬಗೆಹರಿಸಲಾಗುವುದು ಎಂದು ಘೋಷಿಸಿದರು.








