ಸುಳ್ಯ:ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸುಳ್ಯಕ್ಕೆ ಭೇಟಿ ನೀಡಿದರು. ಸಂಸದರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಸುಳ್ಯಕ್ಕೆ ಆಗಮಿಸಿದ ಚೌಟರನ್ನು ಬಿಜೆಪಿ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು. ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿಗಳಾದ
ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ ಮುಖಂಡರಾದ ಎ.ವಿ.ತೀರ್ಥರಾಮ, ಎಸ್.ಎನ್.ಮನ್ಮಥ, ಆಶಾ ತಿಮ್ಮಪ್ಪ, ವೆಂಕಟ್ ದಂಬೆಕೋಡಿ, ಸುಬೋದ್ ಶೆಟ್ಟಿ ಮೇನಾಲ, ಸಂತೋಷ್ ಜಾಕೆ, ವಿನಯಕುಮಾರ್ ಮುಳುಗಾಡು, ಕುಸುಮಾಧರ ಎ.ಟಿ, ಚನಿಯ ಕಲ್ತಡ್ಕ, ಸುರೇಶ್ ಕಣೆಮರಡ್ಕ, ಸಂತೋಷ್ ಕುತ್ತಮೊಟ್ಟೆ, ಶಿವಾನಂದ ಕುಕ್ಕುಂಬಳ ಮತ್ತಿತರರು ಸ್ವಾಗತಿಸಿದರು.
ನೂತನ ಸುಳ್ಯ ಬಿಜೆಪಿ ಕಚೇರಿಯನ್ನು ವೀಕ್ಷಿಸಿದರು. ಸಂಸದರಾಗಿ ಆಯ್ಕೆಯಾದ ಬಳಿಕ ಅವರು ಸುಳ್ಯಕ್ಕೆ ಆಗಮಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಅವರು ಸುಳ್ಯಕ್ಕೆ ಆಗಮಿಸಿ ಮಂಡಲದ ಪ್ರಮುಖರು ಹಾಗೂ ಕಾರ್ಯಕರ್ತರನ್ನು ಭೇಟಿಯಾದರು.