ಬಂಟ್ವಾಳ: ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡರು. ಈ ವೇಳೆ ವಿವಿಧ ಸಮಾಜದ ಪ್ರಮುಖರ ಜೊತೆ ಸಂವಾದ ನಡೆಸಿದರು.ಬಳಿಕ ಮಾತನಾಡಿದ ಅವರು ರಾಷ್ಟ್ರೀಯತೆ ಮತ್ತು ಹಿಂದೂ ವಿಚಾರಧಾರೆಗಳಿಗೆ ಗೌರವ ತರುವುದರ ಜೊತೆಗೆ ಪ್ರಮಾಣಿಕವಾಗಿ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಅವರು ತಿಳಿಸಿದರು. ಕಾರ್ಯಕರ್ತರೇ ಪಕ್ಷದ
ಜೀವಾಳವಾಗಿದ್ದು, ಕಾರ್ಯಕರ್ತರ ಗೆಲುವು ಪಕ್ಷದ ಗೆಲುವಾಗಲಿದೆ. ಪಕ್ಷ ಸಂಘಟಿತವಾಗುವುದರ ಜೊತೆಗೆ ಅಭ್ಯರ್ಥಿ ಗೆಲುವು ಸಾಧಿಸಿದರೆ ಕಾರ್ಯಕರ್ತ ಬಲಿಷ್ಠವಾಗುತ್ತಾನೆ. ಹಾಗಾಗಿ ಪ್ರತಿಯೊಂದು ಬೂತ್ ಗಳಲ್ಲಿ ಕಾರ್ಯಕರ್ತರು ಸಕ್ರೀಯವಾಗಿ ತೊಡಗಿಸಿಕೊಂಡು ಬೂತ್ ನಲ್ಲಿ ಗೆಲುವು ಸಾಧಿಸಲು ಪ್ರಯತ್ನ ಮಾಡಿ ಎಂದು ಮನವಿ ಮಾಡಿಕೊಂಡರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಗಳಾದ ಜಗದೀಶ್ ಶೇಣವ ಉಪಸ್ಥಿತರಿದ್ದರು.ಲೋಕಸಭಾ ಅಭ್ಯರ್ಥಿ ಬಂಟ್ವಾಳದಲ್ಲಿ
ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಕುಲಾಲ ಭವನದಲ್ಲಿ ಕುಲಾಲ ಸಮಾಜದವರೊಂದಿಗೆ ಹಾಗೂ ವಿಶ್ವಕರ್ಮ ಸಭಾ ಭವನದಲ್ಲಿ ವಿಶ್ವಕರ್ಮ ಸಮುದಾಯದವರ ಜೊತೆ ಸಂವಾದ ನಡೆಸಿದರು.