ಸುಳ್ಯ:ಕರ್ನಾಟಕ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸೊಯೇಷನ್ ಮತ್ತು ಸುಳ್ಯದ ಹರೀಶ್ ಫಿಟ್ನೆಸ್ ನೇತೃತ್ವದಲ್ಲಿ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಏ.25ರಂದು ಸುಳ್ಯದ ಬಂಟರ ಭವನದಲ್ಲಿ ನಡೆಯಲಿದೆ ಎಂದು ದೇಹದಾರ್ಢ್ಯ ಸ್ಪರ್ಧೆಯ ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಮಟ್ಟದಲ್ಲಿ
ಮಿಸ್ಟರ್ ಕರಾವಳಿ ಮತ್ತು ಮಿಸ್ಟರ್ ಕರಾವಳಿ ಮೆನ್ ಫಿಸಿಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಮಿಸ್ಟರ್ ತುಳುನಾಡು ಮತ್ತು ಮಿಸ್ಟರ್ ತುಳುನಾಡು ಮೆನ್ ಫಿಸಿಕ್ ಸ್ಫರ್ಧೆಗಳು ನಡೆಯಲಿದೆ.ಶಾರ್ಟ್, ಮೀಡಿಯಂ, ಟಾಲ್, ಸೂಪರ್ ವಿಭಾಗದ ಗ್ರೂಪ್ ವಿಭಾಗದ ಸ್ಪರ್ಧೆಗಳು ನಡೆಯಲಿದೆ. ವಿವಿಧ ವಿಭಾಗಗಳಲ್ಲಿ ವಿಜೇತರಿಗೆ ನಗದು, ಟ್ರೋಫಿ, ಮೆಡಲ್, ಪ್ರಮಾಣ ಪತ್ರ ನೀಡಲಾಗುವುದು.
ಸುಳ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮಿಸ್ಟರ್ ಕರಾವಳಿ 2026 ರಾಜ್ಯ ಮಟ್ಟದ ದೇಹದ ಮತ್ತು ಪುರುಷರ ಮೈಕಟ್ಟು ಸ್ಪರ್ಧೆ ಹಾಗೂ ಮಿಸ್ಟರ್ ತುಳುನಾಡು 2026 ಜಿಲ್ಲಾ ಮಟ್ಟದ ದೇಹದ ಮತ್ತು ಪುರುಷರ ಮೈಕಟ್ಟು ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ದಾಳುಗಳಲ್ಲಿ ಫಿಟ್ನೆಸ್, ಶಿಸ್ತು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದು ನಮ್ಮ ಸ್ಪರ್ಧೆಯ ಗುರಿಯಾಗಿದೆ ಎಂದು ಅವರು ವಿವರಿಸಿದರು.

ವಿಜೇತರಿಗೆ ಒಟ್ಟು 1,67,000 ರೂ ಮೊತ್ತದ ಬಹುಮಾನ ನೀಡಲಾಗುತ್ತಿದ್ದು ರಾಜ್ಯ ಮಟ್ಟದ ದೇಹದಾರ್ಢ್ಯ ಮತ್ತು ಪುರುಷರ ಮೈಕಟ್ಟು ಸ್ಪರ್ಧೆ,ಜಿಲ್ಲಾ ಮಟ್ಟದ ದೇಹದಾರ್ಢ್ಯ ಮತ್ತು ಪುರುಷರ ಮೈಕಟ್ಟು ಸ್ಪರ್ಧೆಗಳಿಗೆ ಕರಾವಳಿ ಮತ್ತು ಒಳನಾಡಿನ ಪ್ರದೇಶಗಳಿಂದ ಉನ್ನತ ಕ್ರೀಡಾಪಟುಗಳನ್ನು ಕರೆತರಲಾಗುತ್ತಿದೆ ಎಂದು ಹೇಳಿದರು.ಭಾಗವಹಿಸುವ ಸ್ಪರ್ದಾಳುಗಳಿಗೆ ನೋಂದಣಿಗೆ ಕೊನೆಯ ದಿನಾಂಕ ಏ.20ರಂದು ನಿಗದಿಪಡಿಸಲಾಗಿದ್ದು ಆಸಕ್ತರು ತಮ್ಮ ತಮ್ಮ ಹೆಸರುಗಳನ್ನು ಮತ್ತು ಶುಲ್ಕ 1 ಸಾವಿರ ರೂ ನೀಡಿ ನೋಂದಾಯಿಸಿ ಕೊಳ್ಳಬಹುದು ಎಂದು ಹೇಳಿದರು.
ಸ್ಪರ್ಧೆಯಲ್ಲಿ ಮಿಸ್ಟರ್ ಕರಾವಳಿ 2026 ಚಾಂಪಿಯನ್ ಬಹುಮಾನವಾಗಿ ರೂ 15 ಸಾವಿರ ರೂಪಾಯಿ ಮತ್ತು ಟ್ರೋಫಿ ಪದಕ ಹಾಗೂ ಪ್ರಮಾಣ ಪತ್ರ,ರನ್ನರ್ ಅಪ್ 7,000/- ನಗದು, ಟ್ರೋಫಿ, ಮೆಡಲ್ ಪ್ರಮಾಣಪತ್ರ, ಮಿಸ್ಟರ್ ತುಳುನಾಡು 2026 ಪ್ರಥಮ 7.000/- ನಗದು, ಟ್ರೋಫಿ,ಮೆಡಲ್ ಪ್ರಮಾಣಪತ್ರ ಅಲ್ಲದೆ ತೃತೀಯ, ಚತುರ್ಥ ಬಹುಮಾನಗಳು, ಗುಂಪು ಹಂತದಲ್ಲಿ ಬಹುಮಾನಗಳನ್ನು

ನೀಡಲಾಗುವುದು, ಭಾಗವಹಿಸಿದ ಎಲ್ಲರಿಗೆ ಪದಕ ಮತ್ತು ಪ್ರಮಾಣಪತ್ರ ದೊರೆಯುತ್ತದೆ.ಎಂದು ಅವರು ವಿವರಿಸಿದರು. ಮಧ್ಯಾಹ್ನ 2.30 ರಿಂದ ಸ್ಪರ್ಧೆಗಳು ಆರಂಭವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಪಾನತ್ತಿಲ್ಲ ಕಾರ್ಯದರ್ಶಿ ವಿಷ್ಣುವರ್ಧನ್ ಬಳ್ಳಾಲ್, ಸದಸ್ಯರುಗಳಾದ ಅಭಿಲಾಶ್ ಕೊಲ್ಲಮೊಗ್ರ,ಅಭಿಜಿತ್ ಸುಳ್ಯ ಶ್ರೀನಿಧಿ ಕೆರೆಮೂಲೆ ಉಪಸ್ಥಿತರಿದ್ದರು.







