ಸುಳ್ಯ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳಿನ ಅಭಾವದಿಂದ ನಿರ್ಮಾಣ ಕ್ಷೇತ್ರಕ್ಕೆ ಸಮಸ್ಯೆಯಾಗಿರುವುದನ್ನು ಖಂಡಿಸಿ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್)ದ ನೇತೃತ್ವದಲ್ಲಿ ಸುಳ್ಯ ಬಸ್ ನಿಲ್ದಾಣದಲ್ಲಿ ಕಾರ್ಮಿಕರ ಬೃಹತ್ ನಡೆಸಲಾಯಿತು. ಕೆಂಪು ಕಲ್ಲು ಮತ್ತು ಮರಳು ಪೂರೈಕೆಯ ಅಭಾವದಿಂದ ಕೆಲಸ ಇಲ್ಲದ ಕುರಿತು, ಈ ವ್ಯವಸ್ಥೆಯನ್ನು ಸರಿಪಡಿಸುವಂತೆ
ಪ್ರತಿಭಟನಾಕಾರರು ಆಗ್ರಹಿಸಿದರು. ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಹಾಗೂ ಇತರ ಸಹಾಯಧನಗಳನ್ನು ಕೂಡಲೇ ಕಾರ್ಮಿಕರಿಗೆ ಪಾವತಿಸುವಂತೆ ಆಗ್ರಹಿಸಿದರು.
ಕಟ್ಟಡ ಕಾರ್ಮಿಕರು, ಕೆಂಪು ಕಲ್ಲು ಹಾಗೂ ಮರಳು ಗುತ್ತಿಗೆದಾರರು, ಸಾಗಾಟಗಾರರು, ಲಾರಿ ಮತ್ತು ಪಿಕ್ಅಪ್ ಚಾಲಕ-ಮ್ಹಾಲಕರು, ಕಟ್ಟಡಕ್ಕೆ ಬೇಕಾದ ಎಲ್ಲಾ ರೀತಿಯ ಕಚ್ಚಾ ವಸ್ತುಗಳ ಮಾರಾಟಗಾರರು, ಗುತ್ತಿಗೆದಾರರು, ಇಂಜಿನಿಯರರು, ರಿಕ್ಷಾ ಚಾಲಕ-ಮಾಲಕರು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ದಿಕ್ಸೂಚಿ ಭಾಷಣ ಮಾಡಿದರು.
ಶಾಸಕಿ ಭಾಗೀರಥಿ ಮುರುಳ್ಯ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿ.ಎಂ ಎಸ್ ಜಿಲ್ಲಾಧ್ಯಕ್ಷ
ಅನಿಲ್ ಕುಮಾರ್ ಯು .ಬಿ, ಗುತ್ತಿಗೆದಾರರ ಸಂಘದ ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ , ಕೆಂಪು ಕಲ್ಲು ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರಕಾಶ್ ಅಡ್ಕಾರ್, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಬಿ ಎಂ ಎಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್, ಪೈಂಟರ್ ಅಲೋಷಿಯನ್ನ ಅಧ್ಯಕ್ಷ ಜಗದೀಶ್ ಕಾಯರ್ತೋಡಿ ಮರಳು ಪೂರೈಕೆ ಹಾಗೂ ಗುತ್ತಿಗೆದಾರರ ಸಂಘ , ಟೂರಿಸ್ಟ್ ವ್ಯಾನು ಹಾಗೂ ಬಸ್ ಚಾಲಕರ ಸಂಘ , ಗೂಡ್ಸ್ ಲಾರಿ ಮತ್ತು ಪಿಕಪ್ ಮಾಲಕರ ಸಂಘ , ವರ್ತಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.





