ಸುಳ್ಯ:ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಜಿಲ್ಲೆಯಾದ್ಯಂತ ರಕ್ತದಾನಿ ಗಳನ್ನು ಗುರುತಿಸಿ,ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 15 ಬಾರಿಗಿಂತ ಹೆಚ್ಚು ಸಲ ರಕ್ತದಾನ
ಮಾಡಿದ ದಾನಿಗಳನ್ನು ಗುರುತಿಸಿ ಗೌರವಿಸಿ, ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ. ಸುಳ್ಯ ತಾಲೂಕಿನ ರಕ್ತದಾನಿಗಳು ಸುಳ್ಯ ತಾಲೂಕು ಭಾರತೀಯ ರೆಡ್ ಕ್ರಾಸ್ ಸಮಿತಿಯ ಸಭಾಪತಿ ಪಿ. ಬಿ.ಸುಧಾಕರ ರೈ ಗೌರವ ಕಾರ್ಯದರ್ಶಿ, ತಿಪ್ಪೇಶಪ್ಪ ಜಿಲ್ಲಾ ಪ್ರತಿನಿಧಿ
ಸಿಎ ಗಣೇಶ್ ಭಟ್, ಇವರನ್ನು ದಾಖಲೆ ಸಮೇತ ಜೂ.12ರೊಳಗೆ ಸಂಪರ್ಕಿಪಿಸಬೇಕಾಗಿ ಭಾರತೀಯ ರೆಡ್ ಕ್ರಾಸ್ ಸಮಿತಿಯ ಸಭಾಪತಿ ಪಿ. ಬಿ.ಸುಧಾಕರ ರೈ ಪ್ರಕಟಣೆಯ ಲ್ಲಿ ತಿಳಿಸಿದ್ದಾರೆ.