ಸುಳ್ಯ:ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆಯ ಸುಳ್ಯ ವಲಯ ವತಿಯಿಂದ,ಲಯನ್ಸ್ ಕ್ಲಬ್,ಪಂಜ ಇವರ ಸಹಯೋಗದೊಂದಿಗೆ ವಿಶ್ವ ಹೃದಯ ದಿನದ ದಿನ ವಿಶೇಷವಾಗಿ ಕೆ.ವಿ.ಜಿ. ಮೆಡಿಕಲ್ ಕಾಲೇಜಿನಲ್ಲಿ
ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.ಅಧ್ಯಕ್ಷ ಶಶಿ ಶಶಿಗೌಡ, ಉಪಾಧ್ಯಕ್ಷ ಪ್ರಶಾಂತ್ ಶೇಣಿ, ಜಿಲ್ಲಾ ಮಾಧ್ಯಮ ಪ್ರತಿನಿಧಿ ಹರೀಶ್ ರಾವ್, ಖಜಾಂಚಿ ವಸಂತಿ ಹರೀಶ್ ರಾವ್, ಸಂಘಟನಾ ಕಾರ್ಯದರ್ಶಿ ಸುಮಂತ್, ಪರಮ್, ಛಾಯಾ ಕಾರ್ಯದರ್ಶಿ ಕೀರ್ತನ್ ಹಾಗೂ ಸದಸ್ಯರು, ಪಂಜಲಯನ್ಸ್ ಕ್ಲಬ್ ಪಂಜ ಅಧ್ಯಕ್ಷ ನಾಗೇಶ ಕಿನ್ನಿಕುಮೇರಿ, ಮಾಜಿ ಅಧ್ಯಕ್ಷ ಶಶಿಧರ ಪಳಂಗಾಯ, ಕೋಶಾಧಿಕಾರಿ ವಾಸುದೇವ ಮೇಲ್ಪಾಡಿ ಉಪಸ್ಥಿತರಿದ್ದರು.
ಡಾ.ಭಾರತಿ ಎಂ. ಹಾಗೂ ಡಾ.ಅಂಜಲಿ ರಕ್ತದಾನದ ಮಹತ್ವ ವಿವರಿಸಿದರು.





