ಸುಳ್ಯ: ಶಾಲಾ ಮೈದಾನದಲ್ಲಿ ಗಣೇಶೋತ್ಸವ, ಶಾರದೋತ್ಸವ, ಮೊಸರು ಕುಡಿಕೆ ಸಹಿತ ಹಿಂದೂ ಹಬ್ಬಗಳ ಆಚರಣೆಯನ್ನು ನಿರ್ಬಂಧಿಸುವ ಆದೇಶವನ್ನು ಸರಕಾರ ಹೊರಡಿಸಿರುವುದನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ಸಮಿತಿಯ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.ಭಜನೆ ಹಾಡುವ ಮೂಲಕ
ಪ್ರತಿಭಟಿಸಲಾಯಿತು.ಬಿಜೆಪಿ ಮಂಡಲ ಯುವಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ, ಮುಖಂಡರಾದ
ಎ.ವಿ.ತೀರ್ಥರಾಮ, ಹರೀಶ್ ಕಂಜಿಪಿಲಿ, ರಾಜೇಶ್ ರೈ ಕೆಡೆಂಜಿ, ಸುಬೋದ್ ಶೆಟ್ಟಿ ಮೇನಾಲ, ವಿನಯಕುಮಾರ್ ಮುಳುಗಾಡು, ಎ.ಟಿ. ಕುಸುಮಾಧರ, ಸುನಿಲ್ ಕೇರ್ಪಳ, ಶಿವಾನಂದ ಕುಕ್ಕುಂಬಳ,ಮಹೇಶ್ ರೈ ಮೇನಾಲ, ಬೂಡು ರಾಧಾಕೃಷ್ಣ ರೈ, ವಿಕ್ರಂ.ಎ.ವಿ, ಮನುದೇವ್ ಪರಮಲೆ, ನಾರಾಯಣ ಶಾಂತಿನಗರ, ನಿಕೇಶ್ ಉಬರಡ್ಕ, ಬುದ್ಧ ನಾಯ್ಕ್, ಶಶಿಕಲಾ ನೀರಬಿದಿರೆ, ಗುಣವತಿ ಕೊಲ್ಲಂತ್ತಡ್ಕ, ಪುಷ್ಪಾ ಮೇದಪ್ಪ, ಸರೋಜಿನಿ ಪಲ್ಲತ್ತಡ್ಕ,ಕಿಶೋರಿ ಶೇಟ್, ಸುದರ್ಶನ ಪಾತಿಕಲ್ಲು, ಶಿವನಾಥ್ ರಾವ್, ಶೀನಪ್ಪ ಬಯಂಬು, ಸುಪ್ರೀತ್ ಮೋಂಟಡ್ಕ, ಅಶೋಕ್ ಅಡ್ಕಾರ್, ಹೇಮಂತ ಕಂದಡ್ಕ, ಪ್ರಬೋದ್ ಮೇನಾಲ, ಸುನಿಲ್ ಮೇನಾಲ, ಗೋವಿಂದ ಅಳವುಪಾರೆ, ಕೇಶವ ಮಾಸ್ತರ್ ಹೊಸಗದ್ದೆ, ಶಿವರಾಮ ಕೇರ್ಪಳ, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು. ಪ್ರದೀಪ್ ಕೊಲ್ಲರಮೂಲೆ ಮನವಿ ಓದಿದರು. ಜಗನ್ನಾಥ ಜಯನಗರ ವಂದಿಸಿದರು. ಲತೀಶ್ ಗುಂಡ್ಯ ಕಾರ್ಯಕ್ರಮ ನಿರೂಪಿಸಿದರು ಮ ಬಳಿಕ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.