ಸುಳ್ಯ:ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುತ್ತೇವೆ ಎನ್ನುವ ಉಲ್ಲೇಖವನ್ನು ಮಾಡಿರುವುದನದನ್ನು ಖಂಡಿಸುತ್ತೇವೆ. ಈ ಉಲ್ಲೇಖವನ್ನು ಪ್ರಣಾಳಿಕೆಯಿಂದ ಹಿಂಪಡೆಯಬೇಕು ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಆಗ್ರಹಿಸಿದೆ. ಓಲೈಕೆ ರಾಜಕಾರಣದ ಭಾಗವಾಗಿ ತಾವು ಅಧಿಕಾರಕ್ಕೆ ಬಂದಲ್ಲಿ ಭಜರಂಗದಳವನ್ನು
ನಿಷೇಧಿಸುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹೇಳಿದೆ. ರಾಷ್ಟ್ರ ಕಾರ್ಯ, ಮಾತೆಯರ ರಕ್ಷಣೆ, ಗೋಮಾತೆ ರಕ್ಷಣೆ, ಹಿಂದುತ್ವದ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ದೇಶಭಕ್ತರ ಸಂಘಟನೆ ಭಜರಂಗದಳ, ಕೊರೋನಾ, ಪ್ರಾಕೃತಿಕವಿಕೋಪದಂತಹ ಸಂದರ್ಭದಲ್ಲಿ ವಿಶೇಷವಾದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಯಾದ ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದಿರುವುದು ಸರಿಯಲ್ಲ. ಭಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗೆ ಬಿಜೆಪಿ ಬೆಂಬಲವಾಗಿ ನಿಲ್ಲಲಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ತಧಾನ ಕಾರ್ಯದರ್ಶಿಗಳಾದ ಸುಭೋದ್ ಶೆಟ್ಟಿ ಮೇನಾಲ,
ರಾಕೇಶ್ ರೈ ಕೆಡೆಂಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.