ಕಾಯರ್ತೋಡಿ: ಬಿಜೆಪಿ ಕಾಯರ್ತೋಡಿ ಬೂತ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಅಭಿನಂದನಾ ಸಭೆ ಹಿಮಕರ ಕುದ್ಪಾಜೆ ಅವರ ಮನೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು
ಬೂತ್ ಸಮಿತಿ ಅಧ್ಯಕ್ಷ ವಿಜಯ ದೇಂಗೋಡಿ ವಹಿಸಿದ್ದರು. ಸಭೆಯಲ್ಲಿ ಬಿಜೆಪಿ ಸುಳ್ಯ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ. ಹಾಗೂ ಹಿರಿಯ ಮುಖಂಡರಾದ ಪಿ.ಕೆ.ಉಮೇಶ್ ಮಾತನಾಡಿ ಕಾರ್ಯಕರ್ತರನ್ನು ಅಭಿನಂದಿಸಿದರು.ಪಕ್ಷ ಸಂಘಟನೆ, ಪಕ್ಷವನ್ನು ಬಲಪಡಿಸುವ ಬಗ್ಗೆ ತಿಳಿಸಿದರು. ಬೂತ್ ಕಾರ್ಯದರ್ಶಿ ದೀಪಕ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.