ಸುಳ್ಯ: ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ಮರಳು ಮತ್ತು ಕೆಂಪು ಕಲ್ಲಿನ ಅಭಾವವನ್ನು ವಿರೋಧಿಸಿ ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ಖಾಸಗಿ ಬಸ್ಸು ನಿಲ್ದಾಣದ ಬಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಮರಳು ಹಾಗೂ ಕೆಂಪು ಕಲ್ಲಿನ ಅಭಾವದಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಆದುದರಿಂದ ನಿಯಮಗಳನ್ನು
ಸರಳೀಕರಣ ಮಾಡಿ ಮರಳು ಮತ್ತು ಕೆಂಪು ಕಲ್ಲು ಎಲ್ಲರಿಗೂ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಕರಾವಳಿಯ ಎಲ್ಲಾ ಬಿಜೆಪಿ ಶಾಸಕರು ಒಗ್ಗಟ್ಟಾಗಿ ಸಚಿವರು ಮತ್ತು ಮುಖ್ಯಮಂತ್ರಿಗಳಿಗನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಮಾಡುವುದಾಗಿ ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ ಸರಕಾರಕ್ಕೆ ಕೂಲಿ ಕಾರ್ಮಿಕರ ಕಷ್ಟ ಗೊತ್ತಾಗುತ್ತಿಲ್ಲ. ಕಾರ್ಮಿಕರನ್ನು ಗುತ್ತಿಗೆದಾರರನ್ನು ಬೀದಿಗೆ ತಳ್ಳಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಮಾತನಾಡಿ ಜನರ ಸಮಸ್ಯೆಗಳನ್ನು ಪರಿಹರಿಸಲು ಸರಕಾರಕ್ಕೆ, ಕಾಂಗ್ರೆಸ್ಗೆ ಇಚ್ಛಾಶಕ್ತಿ ಇಲ್ಲಾ ಎಂಬುದಕ್ಕೆ ಮರಳು ಮತ್ತು ಕೆಂಪು ಕಲ್ಲಿನ ಸಮಸ್ಯೆ ಜ್ವಲಂತ ಉದಾಹರಣೆ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ , ಜಿಲ್ಲಾ ಕಾರ್ಯದರ್ಶಿ ವಿನಯ ಕುಮಾರ್ ಮುಳುಗಾಡು , ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದರೆ ಉಪಾಧ್ಯಕ್ಷ ಬುದ್ಧ ನಾಯ್ಕ , ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಶಾಂತಿನಗರ ,ಪ್ರಮುಖರಾದ ಜಯಪ್ರಕಾಶ್ ಕುಂಚಡ್ಕ. ವಿಕ್ರಂ ಅಡ್ಪಂಗಾಯ , ಪುಷ್ಪಾ ಮೇದಪ್ಪ ,ಶೀಲಾ ಅರುಣ ಕುರುಂಜಿ,ರಾಜೇಶ್ ಮೇನಾಲ, ಶ್ರೀನಾಥ್ ಬಾಳಿಲ, ಸುನಿಲ್ ಕೇರ್ಪಳ ,ಚಿದಾನಂದ ಕಾಯರ್ತೋಡಿ, ಸಂತೋಷ್ ಕುತ್ತಮೊಟ್ಟೆ, ಜಯರಾಜ್ ಕುಕ್ಕೇಟಿ , ಸತೀಶ್ ನಾಯ್ಕ್ , ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ , ಚಂದ್ರಶೇಖರ ಕೇರ್ಪಳ , ಜಗನ್ನಾಥ ಜಯನಗರ , ಜಗದೀಶ್ ಸರಳಿಕುಂಜ , ಹರೀಶ್ ಬೂಡುಪನ್ನೆ , ದಯಾನಂದ ಕೇರ್ಪಳ, ಮನುದೇವ್ ಪರಮಲೆ, ಕಿಶನ್ ಜಬಳೆ, ಶಂಕರ್ ಪೆರಾಜೆ , ಜಯಂತಿ ಜನಾರ್ದನ, ಸತ್ಯವತಿ ಬಸವನಪಾದೆ , ವಿನುತ ಪಾತಿಕಲ್ಲು , ಭಾರತಿ ಉಳುವಾರು, ನವೀನ್ ಕುದ್ಪಾಜೆ , ಪ್ರದೀಪ್ ಕೊಲ್ಲರಮೂಲೆ , ಬಾಲಚಂದ್ರ ಡಿ ಸಿ , ಹೇಮಂತ್ ಕಂದಡ್ಕ , ಹೇಮಂತ್ ಮಠ , ಜಿನ್ನಪ್ಪ ಪೂಜಾರಿ ,ಸಂದರ್ಶನ ಪಾತಿಕಲ್ಲು ಮತ್ತಿತರರು ಉಪಸ್ಥಿತರಿದ್ದರು.





