ಸುಳ್ಯ: ಸಂವಿಧಾನ ಬದಲಾವಣೆ ಕುರಿತು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆ ಖಂಡನೀಯ. ಅವರು ತಕ್ಷಣ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸುಳ್ಯ ಖಾಸಗೀ ಬಸ್ ನಿಲ್ದಾಣದ ಬಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಮಂಡಲ ಸಮಿತಿ
ಅಧ್ಯಕ್ಷ ವೆಂಕಟ್ ವಳಲಂಬೆ, ಹಿರಿಯ
ಮುಖಂಡ ಪಿ.ಕೆ.ಉಮೇಶ ಮಾತನಾಡಿದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ದ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಸದಸ್ಯೆ ಶೀಲಾ ಕುರುಂಜಿ,
ನಾರಾಯಣ ಎಸ್.ಎಂ. ಶಾಂತಿನಗರ, ಶ್ರೀಕಾಂತ್ ಮಾವಿನಕಟ್ಟೆ, ಮಹೇಶ್ ಮೇರ್ಕಜೆ,ಶಿವಪ್ರಸಾದ್ ನಡುತೋಟ, ನವೀನ್ ಕುದ್ಪಾಜೆ, ಕೇಶವ ಮಾಸ್ಟರ್ ಹೊಸಗದ್ದೆ, ಅಶೋಕ್ ಅಡ್ಕಾರು, ಪ್ರದೀಪ್ ಕೋಲ್ಚಾರ್,, ಹೇಮಂತ್ ಮಠ, ಕೃಷ್ಣಯ್ಯ ಮೂಲೆತೋಟ, ಜಗನ್ನಾಥ ಜಯನಗರ, ಅವಿನಾಶ್ ಕುರುಂಜಿ, ಶೀನಪ್ಪ ಬಯಂಬು,ಸೋಮನಾಥ ಪೂಜಾರಿ, ಭಾರತಿ ಉಳುವಾರು, ಶ್ರೀನಿವಾಸ ಹಳೆಗೇಟು, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು ಮೊದಲಾದವರಿದ್ದರು.
ಬಿಜೆಪಿ ನಗರಾಧ್ಯಕ್ಷ ಎ.ಟಿ.ಕುಸುಮಾಧರ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.