ಸುಳ್ಯ:ಸುಳ್ಯ ಸೇರಿದಂತೆ ವಿವಿಧ ಭಾಗಗಳಲ್ಲಿ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಮರ ಬಿದ್ದು ಸುಳ್ಯಕ್ಕೆ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಅಮ್ಚಿನಡ್ಕ, ಪಂಜಿಗುಂಡಿ, ದೊಡ್ಡೇರಿ ಸೇರಿ ವಿವಿಧ ಕಡೆ ಮರ ಬಿದ್ದ ಕಾರಣ ಸುಳ್ಯಕ್ಕೆ 33 ಕೆವಿ ಲೈನ್ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ವಿವಿಧ ಕಡೆ ಮರ ಬಿದ್ದು ಲೈನ್ ಹಾನಿ ಆಗಿರುವ ಕಾರಣ ದುರಸ್ತಿ ಕಾರ್ಯ ನಡೆಯುತಿದೆ. ವಿದ್ಯುತ್ ಸರಬರಾಜು

ಮರುಸ್ಥಾಪನೆ ರಾತ್ರಿ 10 ಗಂಟೆಯ ಬಳಿಕವಷ್ಟೇ ಸಾಧ್ಯ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ಭಾರೀ ಮಳೆ ಮತ್ತು ಗಾಳಿಗೆ ಮರ ಬಿದ್ದು, ಮೈನ್ ಲೈನ್ ಮಾತ್ರವಲ್ಲದೆ ಪೈಚಾರ್, ಹಳೆಗೇಟು ವಿದ್ಯಾನಗರ ಸೇರಿದಂತೆ ವಿವಿಧ ಕಡೆ ವಿದ್ಯುತ್ ಲೈನ್ಗಳಿಗೆ ವಿವಿಧ ಕಡೆ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ. ಮಾರ್ಚ್ ತಿಂಗಳಲ್ಲಿ ಸುರಿದ ಎರಡನೇ ಮಳೆಗೂ ಸುಳ್ಯ ಕತ್ತಲಲ್ಲಿ ಕಳೆಯುವಂತಾಗಿದೆ. ಮಾ.12ರಂದು ಸುರಿದ ಮಳೆಗೆ ಮರ ಬಿದ್ದು ಸುಮಾರು 20 ಗಂಟೆಗಳ ಕಾಲ ವಿದ್ಯುತ್ ಕಡಿತವಾಗಿತ್ತು. ಇದೀಗ ಎರಡನೇ ಮಳೆಗೂ ಸುಳ್ಯಕ್ಕೆ ಕತ್ತಲು ಖಾತ್ರಿಯಾಗಿದೆ.