ಸುಳ್ಯ:ಲೋಕಸಭಾ ಚುನಾವಣೆಯ ಪ್ರಚಾರವನ್ನು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಯಶಸ್ವಿಯಾಗಿ ನಿರ್ವಹಣೆ ಮಾಡಿದೆ. ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್ಗಳಲ್ಲಿ ಎರಡು ಹಂತದಲ್ಲಿ ಮನೆ ಮನೆ ಪ್ರಚಾರ ಮಾಡಿದೆ. ಮತಾದಾರರಿಂದ ಬಿಜೆಪಿ ಬಗ್ಗೆ ಉತ್ತಮ ಒಲವಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಈ ಚುನಾವಣೆ ದೇಶದ ಭವಿಷ್ಯ, ಭದ್ರತೆಯ ದೃಷ್ಟಿಯಿಂದ
ಮಹತ್ತರವಾದುದು. ಸುಳ್ಯದ ಪ್ರತಿ ಬೂತ್ಗಳಲ್ಲಿ 100 ಮತ ಜಾಸ್ತಿ ಮಾಡುತ್ತೇವೆ ಎಂಬುದು ಕಾಂಗ್ರೆಸ್ಸಿಗರ ಭ್ರಮೆ ಅಸ್ಟೇ ಎಂದು ಹೇಳಿದರು. ಸುಳ್ಯದಲ್ಲಿ ನಿರೀಕ್ಷೆಗೂ ಮೀರಿ ಬಹುಮತ ಬರಲಿದ್ದು ಸುಳ್ಯದಲ್ಲಿ 60 ಸಾವಿರ ಮತದ ಬಹುಮತ ಬರಲಿದೆ ಎಂಬ ನಿರೀಕ್ಷೆ ಇದ್ದು ಆತ್ಮ ವಿಶ್ವಾಸದಿಂದ ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದರು.
ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಸಾಮಾನ್ಯ ಜನರ ಸಮಸ್ಯೆಗೆ ಸ್ಪಂದಿಸುವ ಮೂಲಕ ಸುಳ್ಯದಲ್ಲಿ ಬಿಜೆಪಿ ಗಟ್ಟಿಯಾಗಿ ಬೆಳೆದಿದೆ. ಈ ಬಾರಿಯೂ ದೊಡ್ಡ ಅಂತರದ ಗೆಲುವು ಸಾಧಿಸಲಿದೆ ಎಂದರು. ಕೇಂದ್ರ ಅಥವಾ ರಾಜ್ಯದ ಯೋಜನೆಗಳನ್ನು ಅನುಷ್ಠಾನ ಮಾಡಲು ಪ್ರತ್ಯೇಕ ಸಮಿತಿ ಯಾಕೆ. ಇದೀಗ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಮಾಡಿ ಗೌರವ ಧನ ನೀಡಿ ಲಕ್ಷಾಂತರ ಹಣ ಪೋಲು ಮಾಡುವುದು ಯಾಕೆ ಎಂದು ಪ್ರಶ್ನಿಸಿದ ಅವರು ಅಧಿಕಾರಿಗಳಿಂದ ಯೋಜನೆ ಅನುಷ್ಠಾನ ಮಾಡಿಸಬೇಕು. ಪ್ರತ್ಯೇಕ ಸಮಿತಿ ಮಾಡಿದರೆ, ಅಧಿಕಾರಿಗಳಿಗೆ ಏನು ಕೆಲಸ ಎಂದು ಕೇಳಿದರು. ಕೇಂದ್ರದ ಯೋಜನೆಗಳು ಯಾವುದೇ ಸಮಿತಿ ಇಲ್ಲದೆ ನೇರವಾಗಿ ಜನರಿಗೆ ತಲುಪಿದೆ ಎಂದು ಬೊಟ್ಟು ಮಾಡಿದರು.
ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಮಾತನಾಡಿ ‘ಮುದ್ರಾ ಯೋಜನೆ, ಕಿಸಾನ್ ಸಮ್ಮಾನ್, ಫಸಲ್ ಭೀಮಾ ಯೋಜನೆಯಡಿಯಲ್ಲಿ ಲಕ್ಷಾಂತರ ರೂ ಕೃಷಿಕರಿಗೆ ಬಂದಿದೆ.ಸದೃಢವಾದ ಸರಕಾರವನ್ನು ಮುನ್ನಡೆಸಿದ ನರೇಂದ್ರ ಮೋದಿ ಸರಕಾರ ಜನರನ್ನು ಸ್ವಾವಲಂಬಿಯಾಗಲು ಮಾಡಲು 800 ಕ್ಕೂ ಹೆಚ್ಚು ಯೋಜನೆಗಳನ್ನು ರೂಪಿಸಿದೆ. 13 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತಂದಿದ್ದಾರೆ. 2047ಕ್ಕೆ ವಿಕಸಿತ ಭಾರತ ಎಂಬ ಕಲ್ಪನೆಯಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು.ಕಾಂಗ್ರೆಸ್ ಸುಳ್ಯದಲ್ಲಿ ಲೀಡ್ ಪಡೆಯುವ ಕನಸು ಕಾಣುವುದಿಲ್ಲ. ಸಮನಾದ ರೀತಿಯಲ್ಲಿ ಮತ ಪಡೆಯವುದಷ್ಟೇ ಅವರ ಕನಸು. ಬಿಜೆಪಿ ಲೀಡ್ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದರು.
ನಗರದದಲ್ಲಿ ನಿವೇಶನ ರಹಿತರಿಗೆ ನಿವೇಶನ ಕೊಡಲು ನಗರ ಪಂಚಾಯತ್ನಲ್ಲಿ ಭೂಮಿ ಇಲ್ಲ. ಕಂದಾಯ ಇಲಾಖೆಗೆ ಕೇಳಿದರೆ ನಿವೇಶನ ಲಭಿಸುತ್ತಿಲ್ಲ. ಆದರೂ ಎರಡು ಜಾಗ ಗುರುತಿಸಿದ್ದೇವೆ. ಸೂಕ್ತವಧ ರೀತಿಯಲ್ಲಿ ವಸತಿ ನೀಡಲು ಯೋಜನೆ ರೂಪಿಸಿದರೂ ಸೂಕ್ತ ಸ್ಥಳ ಸಿಕ್ಕಿಲ್ಲ. ಕಟ್ಟಡ ರಚನೆ ಮಾಡಿ ನೀಡುವ ವಸತಿ ಯೋಜನೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು.
ಬಿಎಂಎಸ್ ತಾಲೂಕು ಸಂಘಟನಾ ಕಾರ್ಯದರ್ಶಿ ಮದುಸೂಧನ ಮಾತನಾಡಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಬರ್ತಾ ಇಲ್ಲ. ಹಲವು ವಿದ್ಯಾರ್ಥಿ ವೇತನದಲ್ಲಿ ಶೇ.80 ಕಡಿತ ಮಾಡಿದ್ದಾರೆ. ಕಾರ್ಮಿಕ ಕಲ್ಯಾಣ ಮಂಡಳಿಯ ಹಣವನ್ನು ಬೇರೆಡೆಗೆ ವರ್ಗಾಯಿಸುತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ಮಂಡಲ ಉಪಾಧ್ಯಕ್ಷ ಶಿವಪ್ರಸಾದ್ ನಡುತೋಟ, ಸುದರ್ಶನ ಪಾತಿಕಲ್ಲು ಉಪಸ್ಥಿತರಿದ್ದರು.