ಸುಳ್ಯ: ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಸದಸ್ಯತ್ವ ಅಭಿಯಾನ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು. ಹಿರಿಯರಾದ ಅಪ್ಪಯ್ಯ ಮಣಿಯಣಿ ಕಾರ್ಯಕರ್ತರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಸುಳ್ಯ ನಗರ ಮಹಾ ಶಕ್ತಿ ಕೇಂದ್ರದ ವತಿಯಿಂದ ನೂತನ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ್, ರಾಜ್ಯದಲ್ಲಿ
ಉತ್ತಮ ಕನ್ನಡ ಶಾಲೆ ಪ್ರಶಸ್ತಿ ಪಡೆದ ಕೋಲ್ಚಾರ್ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ, ಜಾಲ್ಸೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು ಇವರನ್ನು ಗೌರವಿಸಲಾಯಿತು. ಹಿರಿಯರಾದ ಅಪ್ಪಯ್ಯ ಮಣಿಯಣಿ ಸನ್ಮಾನ ನೆರವೇರಿಸಿದರು.ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ. ಎ. ಟಿ, ಕಾರ್ಯದರ್ಶಿ ನಾರಾಯಣ ಎಸ್. ಎಂ, ನಗರ ಉಸ್ತುವಾರಿ ಮಂಡಲ ಉಪಾಧ್ಯಕ್ಷ ಶಿವಾನಂದ ಕುಕುಂಬಳ, ಕೇಶವ ಮಾಸ್ಟರ್, ಮಂಡಲ ಸಮಿತಿ ಸದಸ್ಯರಾದ ಬೂಡು ರಾಧಾಕೃಷ್ಣ. ರೈ, ಜಿನ್ನಪ್ಪ ಪೂಜಾರಿ. ಶಕ್ತಿ ಕೇಂದ್ರದ ಪ್ರಮುಖರಾದ ಚಂದ್ರಶೇಖರ ವಕೀಲರು, ರಮೇಶ ಇರಂತಮಜಲ್, ಹಾಗೂ ನಗರದ ಪ್ರಮುಖರು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು