ಮಂಗಳೂರು: ಮತ ಎಣಿಕೆ ಕಾರ್ಯ ಮುಂದುವರಿಯುತ್ತಿದ್ದಂತೆ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ. 6 ಸುತ್ತು ಕೊನೆಗೊಂಡಾಗ ಭಾಗೀರಥಿ ಮುರುಳ್ಯ 8418 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಭಾಗೀರಥಿ 28,045 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ 20,627 ಮತ ಪಡೆದಿದ್ದಾರೆ. 6ನೇ ಸುತ್ತಿನಲ್ಲಿ ಬಿಜೆಪಿಗೆ 6333 ಮತ ಹಾಗೂ ಕಾಂಗ್ರೆಸ್ಗೆ 3230 ಮತ ದೊರಕಿದೆ. 5ನೇ ಸುತ್ತಿನಲ್ಲಿ ಬಿಜೆಪಿಗೆ 6650 ಮತ ಹಾಗೂ ಕಾಂಗ್ರೆಸ್ಗೆ 3748 ಮತ ದೊರಕಿದೆ.4ನೇ ಸುತ್ತಿನಲ್ಲಿ ಭಾಗೀರಥಿ ಮುರುಳ್ಯ 5680 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ 4180 ಮತ ಪಡೆದಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.