ಸುಳ್ಯ:ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತೆಯ ಹಿನ್ನಲೆಯಲ್ಲಿ ಬಿಜೆಪಿ ಹಮ್ಮಿಕೊಂಟಿರುವ ಗ್ರಾಮ ಚಲೋ ಅಭಿಯಾನದ ಪೂರ್ವಭಾವಿ ಸಭೆ ಸುಳ್ಯ ಬಿಜೆಪಿ ಕಚೇರಿಯಲ್ಲಿ ನಡೆಯಿತು.ಫೆ.9ರಿಂದ 11ರ ತನಕ ಬಿಜೆಪಿ ವತಿಯಿಂದ ಗ್ರಾಮ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಅನ್ವಯ ಸುಳ್ಯ ವಿಧನಾಸಭಾ ಕ್ಷೇತ್ರದಲ್ಲಿಯೂ ಗ್ರಾಮ ಚಲೋ ಅಭಿಯಾನ
ನಡೆಯಲಿದೆ. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಗ್ರಾಮ ಚಲೋ ಕಾರ್ಯಕ್ರಮದ ವಿಭಾಗ ಸಂಚಾಲಕ ಸಂತೋಷ್ ಕುಮಾರ್ ಬೋಳಿಯಾರು ಸಭೆಯಲ್ಲಿ ಭಾಗವಹಿಸಿ ಗ್ರಾಮ ಚಲೋ ಕಾರ್ಯಕ್ರಮದ ಮಾಹಿತಿ ನೀಡಿದರು. ಗ್ರಾಮ ಚಲೋ ಕಾರ್ಯಕ್ರಮದ ಸುಳ್ಯ ಸಂಚಾಲಕ ವಿನಯಕುಮಾರ್ ಕಂದಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದಲ್ಲಿ ಎಲ್ಲಾ ಹಳ್ಳಿಗಳನ್ನೂ ಸಂಪರ್ಕಿಸುವ ಕಾರ್ಯಕ್ರಮ ಇದಾಗಿದೆ. ಗ್ರಾಮದ ಹಿರಿಯರು, ಪ್ರಮುಖ ಕಾರ್ಯಕರ್ತರ ಸಂಪರ್ಕಿಸಿ ಬೂತ್ಗಳನ್ನು ಕ್ರಿಯಾಶೀಲವಾಗಿಸುವುದು. ಕೇಂದ್ರ ಸರಕಾರದ ಯೋಜನೆಗಳನ್ನು ತಲುಪಿಸುವುದು ಕಾರ್ಯಕ್ರಮದ ಯೋಜನೆ. ಪ್ರತಿ ಗ್ರಾಮದಿಂದ 95 ಮಂದಿ ಪ್ರಮುಖರು ಇನ್ನೊಂದು ಗ್ರಾಮಕ್ಕೆ ಭೇಟಿ ನೀಡುವುದು. 95 ಮಂದಿ ಪ್ರಮುಖರು ಬರುವ ಕಾರ್ಯಕರ್ತರನ್ನು ಸ್ವಾಗತಿಸಲಾಗುವುದು. ಗ್ರಾಮ ಚಲೋ ಕಾರ್ಯಕ್ರಮದ ಜೊತೆಗೆ ಗೋಡೆ ಬರಹ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಸುಳ್ಯ ತಾಲೂಕಿನ 76 ಗ್ರಾಮ ಮತ್ತು ಎರಡು ಪಟ್ಟಣ ಪಂಚಾಯತ್ಗಳಲ್ಲಿ ಗ್ರಾಮ ಚಲೋ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ‘ಸುಳ್ಯ ಮಿರರ್’ಗೆ ತಿಳಿಸಿದ್ದಾರೆ.