ಸುಳ್ಯ:ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಏ.25 ರಂದು ಸುಬ್ರಹ್ಮಣ್ಯ ಭಾಗದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಭಾಗವಹಿಸಿದ್ದಾರೆ. ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸಹಿತ
ಹಲವು ಮಂದಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದಾರೆ. ಸುಬ್ರಹ್ಮಣ್ಯ ಗ್ರಾಮದ ವಾಲಗದಕೇರಿಯಲ್ಲಿ ಮನೆ ಮನೆ ಮತ ಪ್ರಚಾರ ಮಾಡಿದರು.ಸುಬ್ರಹ್ಮಣ್ಯದ ಆಟೋ ಮತ್ತು ಟಾಕ್ಸಿ ಚಾಲಕರನ್ನು ಭೇಟಿ ಮತ ಯಾಚಿಸಿದರು. ಸುಬ್ರಹ್ಮಣ್ಯದ ಬೀದಿಬದಿ ವ್ಯಾಪರಿಗಳನ್ನು ಭೇಟಿ ಮಾಡಿ ಮತ ಹಾಕುವಂತೆ ವಿನಂತಿಸಲಾಯಿತು.
ದೇವರಗದ್ದೆ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ಪ್ರಸಾದ ಸ್ವೀಕರಿಸಲಾಯಿತು.
ಆಭಯಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ,ಆಶೀರ್ವಾದ ಪಡೆದರು.