ಸುಳ್ಯ: ಕಾಂಗ್ರೆಸ್ ಮುಖಂಡ ಎನ್.ಜಯಪ್ರಕಾಶ್ ರೈ ಅವರು ರಾಜೀನಾಮೆ ಕೊಡುವ ಸಂದರ್ಭ ಬಂದಿರುವುದು ದುರದೃಷ್ಟಕರ.ಅವರ ಈ ನಿರ್ಧಾರ ಪಕ್ಷಕ್ಕೆ ದೊಡ್ಡ ನಷ್ಟ ಎಂದು ಸುಳ್ಯದ ಹಿರಿಯ ಕಾಂಗ್ರೆಸ್ ಮುಖಂಡ ರಾಜಾರಾಂ ಭಟ್ ಬೆಟ್ಟ ಹೇಳಿದ್ದಾರೆ. ಅವರು ಪಕ್ಷಕ್ಕೆ ಬಂದ ಬಳಿಕ
ಸಂಪೂರ್ಣ ವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ಧರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದಲ್ಲಿ ಶಿಸ್ತು, ಸಮಯ ಪಾಲನೆಗೆ ಮಹತ್ವ ನೀಡಿದ್ದರು. ಎಷ್ಟೇ ದೊಡ್ಡ ನಾಯಕರು ಬಂದರೂ ತಾವು ಹೇಳಬೇಕಾದ್ದನ್ನು ನಿರ್ಭೀತಿಯಿಂದ, ನೇರವಾಗಿ ಹೇಳಿ ವಿಷಯವನ್ನು ಮಂಡಿಸುತ್ತಿದ್ದರು.ಪಕ್ಷಕ್ಕೆ ಘನತೆ, ಗೌರವ ತಂದಿದ್ದರು. ಕಾರ್ಯಕರ್ತರ ಪ್ರೀತಿ, ವಿಶ್ವಾಸ ಗಳಿಸಿದ್ದರು.ಅವರ ಅರ್ಹತೆ ಸಾಮರ್ಥ್ಯವನ್ನು ಪಕ್ಷದ ಜಿಲ್ಲಾ, ರಾಜ್ಯ ನಾಯಕರು ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಬೇಕಿತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.










