ಬೆಳ್ಳಾರೆ: ಬೆಳ್ಳಾರೆ ಒಡಿಯೂರು ಘಟ ಸಮಿತಿ ಸಭೆ ಬೆಳ್ಳಾರೆ ಕೆ ಪಿಎಸ್ ನಲ್ಲಿ ಮಾ 17 ರಂದು ನಡೆಯಿತು. ಘಟ ಸಮಿತಿಯ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಯಿತು.ಸಭೆಯಲ್ಲಿ ತುಳು ಸಮ್ಮೇಳನ ನಡೆಸುವ ಕುರಿತು ವಿಚಾರ ವಿಮರ್ಶೆ ಮಾಡಲಾಯಿತು. ಯೋಜನ ನಿರ್ದೇಶಕರಾದ
ಕಿರಣ್ ಉರ್ವ ಉಪಸ್ಥಿತರಿದ್ದು ಬೆಳ್ಳಾರೆಯ ಘಟ ಸಮಿತಿಯ ಆಶ್ರಯದಲ್ಲಿ ಸುಳ್ಯ ತಾಲೂಕು ತುಳು ಸಮ್ಮೇಳನ ನಡೆಸುವ ಪ್ರಸ್ತಾಪ ಸಭೆಯ ಮುಂದಿಟ್ಟರು. ಸಮಿತಿಯ ಸದಸ್ಯರು ಮುಂದಿನ ಸಭೆಯಲ್ಲಿ ತುಳು ಸಮ್ಮೇಳನ ನಡೆಸುವ ಬಗ್ಗೆ ಅವರವರ ಸಂಘಗಳಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು. ಸುಳ್ಯ ತಾಲ್ಲೂಕು ಗ್ರಾಮೋತ್ಸವ ಸಮಿತಿಯ ಸಂಚಾಲಕ ಜೆ ಕೆ ರೈ ಸಮ್ಮೇಳನ ತಯಾರಿಯ ಮಾಹಿತಿ ನೀಡಿದರು. ಘಟ ಸಮಿತಿ ಅಧ್ಯಕ್ಷ ಸುಹಾಸ್ ಅಲೆಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು.ಸುಳ್ಯ ಒಡಿಯೂರು ಬ್ಯಾಂಕ್ ನ ಮೆನೇಜರ್ ಸಂತೋಷ್ ಶೆಟ್ಟಿ, ಮೇಲ್ವಿಚಾರಕಿ ಗೀತಾ ಮತ್ತಿತರರು ಉಪಸ್ಥಿತರಿದ್ದರು. ಯೋಜನೆಯ ಶೀಭಾ ಸ್ವಾಗತಿಸಿದರು. ಮೇಲ್ವಿಚಾರಕಿ ಗೀತಾ ನೆಟ್ಟಾರು ವಂದಿಸಿದರು.









