ಬೆಳ್ಳಾರೆ:ಮೂರು ದಿನಗಳ ಕಾಲ ನಡೆಯುವ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ವಸಂತ ಸಂಭ್ರಮಕ್ಕೆ ಜ.3 ರಂದು ಚಾಲನೆ ದೊರೆಯಿತು. ಉದ್ಘಾಟನಾ ಸಮಾರಂಭಕ್ಕೂ ಮುನ್ನ ಆಕರ್ಷಕ ಮೆರವಣಿಗೆ ನಡೆಯಿತು.
ಪ್ರಾಥಮಿಕ ಶಾಲಾ ವಿಭಾಗದ ‘ಶತಮಾನೋತ್ತರ, ಪ್ರೌಢಶಾಲಾ ವಿಭಾಗದ ‘ಅಮೃತ’ ಪದವಿ ಪೂರ್ವ ಕಾಲೇಜಿನ ‘ಸ್ವರ್ಣ ಸಂಭ್ರಮವನ್ನು ಒಟ್ಟಾಗಿ ವಸಂತ ಸಂಭ್ರಮ ಕಾರ್ಯಕ್ರಮವಾಗಿ 3 ದಿನಗಳ ಕಾಲ ಆಚರಿಸಲಾಗುತಿದೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಬೆಳ್ಳಾರೆ ಮೇಲಿನ ಪೇಟೆಯಿಂದ ನಾಸಿಕ್ ಬ್ಯಾಂಡ್ನೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು.ಈ ‘ಶೈಕ್ಷಣಿಕ ದಿಬ್ಬಣಕ್ಕೆ ಬೆಳ್ಳಾರೆ ಪೊಲೀಸ್ ಉಪನಿರೀಕ್ಷಕರಾದ ಈರಯ್ಯ ದೂಂತೂರು ಚಾಲನೆ ನೀಡಿದರು. ವಸಂತ ಸಂಭ್ರಮ ಸಮಿತಿ ಅಧ್ಯಕ್ಷೆ ರಾಜೀವಿ ಆರ್ ರೈ, ಸಂಚಾಲಕರಾದ ಎಸ್.ಎನ್.ಮನ್ಮಥ, ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ,ವಸಂತ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ,ಪ್ರಾಂಶುಪಾಲರಾದ ಜನಾರ್ದನ ಕೆ. ಎನ್.,ಉಪ ಪ್ರಾಂಶುಪಾಲರಾದ ಉಮಾಕುಮಾರಿ, ಶಾಲಾ ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ.ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರಗಳು:ಪ್ರೇಮ್ ಸ್ಟುಡಿಯೋ ಬೆಳ್ಳಾರೆ