ಸುಳ್ಯ:ಸಿಬಿಎಸ್ಸಿ ಹತ್ತನೇ ತರಗತಿ ಹಾಗೂ 12 ನೇ ತರಗತಿಯ ಫಲಿತಾಂಶ ಮೇ.12 ರಂದು ಪ್ರಕಟಗೊಂಡಿದೆ. ಬೆಳ್ಳಾರೆಯ ಜ್ಲಾನ ಗಂಗಾ ಸೆಂಟ್ರಲ್ ಸ್ಕೂಲ್ಗೆ 10 ನೇ ತರಗತಿಯಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 48 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. 32 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ
ಅವ್ಯಯಾ ಆನೆಕಾರ್
ಶ್ರೇಯಾನ್ ಕೆ.
16 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಉತ್ತೀರ್ಣರಾಗಿದ್ದಾರೆ. 500ರಲ್ಲಿ ತಲಾ 479 ಅಂಕ ಪಡೆದ ಅವ್ಯಯಾ ಆನೆಕಾರ್ (ಶೇ.95.80),ಶ್ರೇಯಾನ್ ಕೆ.(ಶೇ.95.80) ಪ್ರಥಮ ಸ್ಥಾನ ಪಡೆದಿದ್ದಾರೆ. 478 ಅಂಕ ಪಡೆದ ಪೂರ್ವಿ ಕೆ.ಎಂ(ಶೇ.95.60) ದ್ವಿತೀಯ ಹಾಗೂ 473 ಅಂಕ ಪಡೆದ ಪೃಥ್ವಿನ್ ಗೌಡ.ಬಿ,(ಶೇ.94.60) ತೃತೀಯ ಸ್ಥಾನ
ಪೂರ್ವಿ ಕೆ.ಎಂ
ಪೃಥ್ವಿನ್ ಗೌಡ.ಬಿ,
ಪಡೆದಿದ್ದಾರೆ. ತನ್ಮಯಿ ಕೆ.ಪ್ರಸಾದ್ (469- ಶೇ93.80), ಪರಿಣಿತ್ ಪಿ.ತಂಟೆಪ್ಪಾಡಿ,(468-ಶೇ.93.60) ಗಣೇಶ್.ಕೆ (460-ಶೇ.92), ಎಂ.ಡಿ.ಫಯಾಜ್(459-ಶೇ.91.80), ತನ್ವಿ ಎಂ.ಪಿ (459-ಶೇ.91.80), ಸೃಷ್ಠಿ ಎಂ.ಎಸ್.(459-ಶೇ.91.80), ವಿಕಾಸ್ ಬಿ.(457-ಶೇ.91.40), ಸನಾ ಫಾತಿಮಾ(455- ಶೇ.91), ಸಮೃದ್ಧಿ ಶೆಣೈ (451-ಶೇ.90.20), ಆಶರ್ ಪಿಂಟೋ(450-ಶೇ.90) ಅತೀ ಹೆಚ್ಚು ಅಂಕ ಪಡೆದಿದ್ದಾರೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ನ ಸಂಚಾಲಕರಾದ ಎಂ.ಪಿ.ಉಮೇಶ್, ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.