ಬೆಳ್ಳಾರೆ:ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಬೆಳ್ಳಾರೆಯ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್. ಸಿಬಿಎಸ್ಇ ಶಿಕ್ಷಣ ನೀಡುವ ಸಂಸ್ಥೆಯಲ್ಲಿ ನರ್ಸರಿಯಿಂದ 10ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತಿದೆ. ಎಂ.ಪಿ.ಉಮೇಶ್ ಅವರ ಸಂಚಾಲಕತ್ವದಲ್ಲಿ ಕಳೆದ 25 ವರ್ಷಗಳಿಂದ ಮುನ್ನಡೆಯುತ್ತಿರುವ ಜ್ಞಾನ ಗಂಗಾ ಸ್ಕೂಲ್ ಸುಳ್ಯ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ
ಮೌಲ್ಯಯುತ ಶಿಕ್ಷಣ ಧಾರೆಯೆರೆಯುವ ಮೂಲಕ ಶಿಕ್ಷಣ ಕ್ರಾಂತಿ ಮಾಡಿದೆ. ಕೇಂದ್ರಿಯ ಪಠ್ಯ ಕ್ರಮದಲ್ಲಿ (CBSE) ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಸರ್ವಾಂಗಿಣ ಪ್ರಗತಿಗೆ ಆದ್ಯತೆ ನೀಡುತಿದೆ. ಸತತ ಶೇ.100 ಫಲಿತಾಂಶದೊಂದಿಗೆ ಸ್ಕೂಲ್ ಮುನ್ನಡೆದಿದ್ದು ರಾಜ್ಯದ ಮುಂಚೂಣಿ ಸ್ಕೂಲ್ಗಳ ಪಟ್ಟಿಗೆ ಸೇರಿದೆ. ಎಲ್ಲಾ ಆಧುನಿಕ ಸೌಲಭ್ಯಗಳು ಹಾಗು ಎಲ್ಲಾ ಸವಲತ್ತುಗಳೊಂದಿಗೆ ಕಾರ್ಯಾಚರಿಸುವ ಸ್ಕೂಲ್ನಲ್ಲಿ 2023-24ನೇ ಸಾಲಿಗೆ ದಾಖಲಾತಿ ಆರಂಭಗೊಂಡಿದೆ.
10ನೇ ತರಗತಿಯಲ್ಲಿ ಶೇಕಡ 100ರಷ್ಟು ಫಲಿತಾಂಶ. ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನುರಿತ ಹಾಗು ಅನುಭವಿ ಶಿಕ್ಷಕ ವೃಂದ, ಆಧುನಿಕ ಕ್ಲಾಸ್ ರೂಮ್ಗಳು. ಹಸಿರು ಪರಿಸರದ ಎಕ್ಸ್ಕ್ಲೂಸಿವ್ ಕ್ಯಾಂಪಸ್ ಸ್ಕೂಲ್ನ ಹೆಗ್ಗಳಿಕೆ. ಇಂಗ್ಲೀಷ್ ಭಾಷಾ ಶಿಕ್ಷಣಕ್ಕೆ ಮತ್ತು ಇಂಗ್ಲೀಷ್ ಸಂವಹನಕ್ಕೆ ಮತ್ತು ವಿದ್ಯಾರ್ಥಿಯ ವೈಯುಕ್ತಿಕ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತದೆ. ಸಂಗೀತ ತರಗತಿ, ಕೌನ್ಸಿಲಿಂಗ್, ಕ್ರೀಡಾ ಚಟುವಟಿಕೆಗಳು ಹೀಗೆ ಪಠ್ಯ ಹಾಗು ಪಠ್ಯೇತರ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗು
ತಿದೆ. ಅಲ್ಲದೆ ಬೇಸಿಗೆ ಶಿಬಿರಗಳು, ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಅಲ್ಲದೆ ವಿದ್ಯಾರ್ಥಿಗಳ ಪ್ರಯಾಣಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಾಗುತ್ತಿದೆ.
ಸುಳ್ಯ, ಪೇರಾಲು, ಗುತ್ತಿಗಾರು, ಕಾಣಿಯೂರು, ಈಶ್ವರಮಂಗಲ, ಪುತ್ತೂರಿನ ಕುರಿಯ, ಸುಬ್ರಹ್ಮಣ್ಯ, ಕಡಬ, ಪುತ್ತೂರು, ಎಡಮಂಗಲ, ಆಲಂಗಾರು ಹೀಗೆ ನಗರ ಹಾಗು ಗ್ರಾಮೀಣ ಭಾಗದ 12 ಕ್ಕೂ ಹೆಚ್ಚು ಕೇಂದ್ರಗಳಿಂದ ಬಸ್ ಹೊರಡುತ್ತದೆ. ಈ ಬಸ್ ರೂಟ್ ಮೂಲಕ ವಿವಿಧ ಭಾಗಗಳ ವಿದ್ಯಾರ್ಥಿಗಳ ಪ್ತಯಾಣಕ್ಕೆ ಸೌಲಭ್ಯ ಮತ್ತು ಅನುಕೂಲ ಒದಗಿಸಲಾಗುತಿದೆ.
ದಾಖಲಾತಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9481909533
9449829233