ಬೆಳ್ಳಾರೆ:ಬೆಳ್ಳಾರೆ ಯಲ್ಲಿ ಟೌನ್ ಬಾಯ್ಸ್ ಬೆಳ್ಳಾರೆ ಇದರ ವತಿಯಿಂದ ಜರುಗಿದ ಕ್ರಿಕೆಟ್ ಪಂದ್ಯಾಟ ಕಾರ್ಯಕ್ರಮ ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಭಾಗವಹಿಸಿದರು. ಬೆಳ್ಳಾರೆಯಲ್ಲಿ ಸಾರ್ವಜನಿಕರಿಗೆ ಕ್ರಿಡಾಂಗಣ ಅಗತ್ಯ ಇದೆ. ಕ್ರೀಡಾಂಗಣ
ನಿರ್ಮಿಸಬೇಕು ಎಂದು ಸಚಿವರು ಸಚಿವರಲ್ಲಿ ಮನವಿ ಮಾಡಿದರು. ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಂ,ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಬೆಳ್ಳಾರೆ ಗ್ರಾಮ ಪಂಚಾಯಿತಿ ಸದಸ್ಯರಾದ ಅನಿಲ್ ರೈ, ಪೆರುವಾಜೆ ಪಂಚಾಯಿತಿ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಹಮೀದ್ ಬೆಳ್ಳಾರೆ, ಪಂದ್ಯಾಟ ಸಂಘಟಕರು, ಮತ್ತಿತರರು ಉಪಸ್ಥಿತರಿದ್ದರು









