ಸುಳ್ಯ:ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತ ಸಭೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 3 ಹೆಣ್ಣುಮಕ್ಕಳ ಹಾಸ್ಟೇಲ್ ಮತ್ತು ಒಂದು ಗಂಡು ಮಕ್ಕಳ ಹಾಸ್ಟೇಲ್ಗೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತು
ಸಭೆಯಲ್ಲಿ ಚರ್ಚಿಸಲಾಯಿತು. ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅರಂತೋಡಿನಲ್ಲಿರುವ ಗಂಡು ಮಕ್ಕಳ ಹಾಸ್ಟೇಲ್, ಬಿಸಿಎಂನ ಎಲಿಮಲೆ, ಗುತ್ತಿಗಾರು, ವಿವೇಕಾನಂದ ಸರ್ಕಲ್ ಬಳಿ ಇರುವ ಹೆಣ್ಣು ಮಕ್ಕಳ ಹಾಸ್ಟೇಲ್ಗೆ ವಿದ್ಯಾರ್ಥಿಗಳ ಆಯ್ಕೆ ಸಂಬಂಧಪಟ್ಟು ಸಭೆ ನಡೆಯಿತು.ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ,ತಹಶೀಲ್ದಾರ್ ಮಂಜುನಾಥ್ ಎಂ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ. ನಂದಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತ, ನಿಲಯ ಮೇಲ್ವಿಚಾರಕಾರದ ದೀಪಿಕಾ, ವಿಜಯ ಎಂ.ಪಿ. ಸುಹಾನಿಸಿ ಮತ್ತಿತರರು ಭಾಗವಹಿಸಿದ್ದರು.