ಸುಳ್ಯ:ಸುಳ್ಯ ತಾಲೂಕಿನ ಕಳಂಜ ಗ್ರಾಮದ ಒಂದನೇ ವಾರ್ಡ್ ಪಂಜಿಗಾರಿನಿಂದ ಮಣಿಮಜಲು ಹೋಗುವ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಆಗದ ಕಾರಣ ಸಾರ್ವಜನಿಕರು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ಸುಮಾರು 4 ವರ್ಷಗಳಿಂದ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರೂ ಬೇಡಿಕೆ ಈಡೇರದ ಕಾರಣ ಮುಂದೆ ಬರುವ ಲೋಕಸಭಾ ಚುನಾವಣಾ ಯನ್ನು ಬಹಿಷ್ಕಾರ ಮಾಡಿರುವುದಾಗಿ ತೀರ್ಮಾನಿಸಲಾಗಿದೆ ಎಂದು ಸಾರ್ವಜನಿಕರು ಬ್ಯಾನರ್ ಅಳವಡಿಸಿದ್ದಾರೆ.








