ದುಬೈ: ಆರಂಭಿಕ ಆಟಗಾರ ಸೈಫ್ ಹಸನ್ (61 ರನ್; 45ಎ) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ತೌಹಿದ್ ಹೃದಯ್ (58 ರನ್; 37ಎ) ಅವರ ಅರ್ಧಶತಕಗಳ ಬಲದಿಂದ ಬಾಂಗ್ಲಾದೇಶ ತಂಡವು ಏಷ್ಯಾಕಪ್ ಕ್ರಿಕೆಟ್ ಸೂಪರ್ ಫೋರ್ ಪಂದ್ಯದಲ್ಲಿ
ಶ್ರೀಲಂಕಾ ತಂಡವನ್ನು 5 ವಿಕೆಟ್ಗಳಿಂದ ಮಣಿಸಿತು.ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಅಂತಿಮ ಓವರ್ವರೆಗೂ ತೀವ್ರ ಪೈಪೋಟಿ ಕಂಡುಬಂತು. ಲಂಕಾ ನೀಡಿದ್ದ 169 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ 19.5 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಶ್ರೀಲಂಕಾ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 168 ಗಳಿಸಿತು.ಪಥುಮ್ ನಿಸಾಂಕ 22, ಕುಸಾಲ ಮೆಂಡಿಸ್ 34, ಕುಸಾಲ ಪೆರೆರಾ 16, ದಸುನ್ ಶನಾಕಾ ಔಟಾಗದೇ 64, ಚರಿತ ಅಸಲಂಕಾ 21 ರನ್ ಗಳಿಸಿದರು.
ಇಂದಿನ ಸೂಪರ್4 ಹಂತದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ರಾತ್ರಿ ಎಂಟರಿಂದ ಪಂದ್ಯ ಆರಂಭವಾಗಲಿದೆ.





