ಅಬುಧಾಬಿ: ಏಷ್ಯಾ ಕಪ್ ಕ್ರಿಕೆಟ್ನ ರೋಚಕ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು 8 ರನ್ಗಳಿಂದ ಅಫ್ಗಾನಿಸ್ತಾನ ವಿರುದ್ಧ ಗೆಲುವು ಸಾಧಿಸಿತು.
ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 155 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಅಫ್ಗಾನಿಸ್ತಾನ, ಮುಸ್ತಫಿಜುರ್ ರೆಹಮಾನ್ (28ಕ್ಕೆ3) ಹಾಗೂ
ನಸುಮ್ ಅಹಮದ್(11ಕ್ಕೆ2) ಅವರ ಬೌಲಿಂಗ್ ಎದುರು 20 ಓವರ್ಗಳಲ್ಲಿ 146 ರನ್ಗಳಿಗೆ ಆಲೌಟ್ ಆಯಿತು.77 ರನ್ಗಳಿಗೆ 5 ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿದ್ದ ಅಫ್ಗಾನ್ಗೆ ಅಜ್ಮತ್ವುಲ್ಲಾ ಒಮರ್ಝೈ (30; 16ಎ) ಗೆಲುವಿನ ಆಸೆ ಚಿಗುರಿಸಿದರಾದರೂ, ಪದೇಪದೆ ವಿಕೆಟ್ ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು.ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾದ ಆರಂಭ ಆಟಗಾರರಾದ ತಂಜಿದ್ ಹಸನ್ (52, 31ಎಸೆತ) ಮತ್ತು ಸೈಫ್ ಹಸನ್ (30) ಅವರು 6.3 ಓವರುಗಳಲ್ಲೇ 63 ರನ್ ಸೇರಿಸಿ ಮಿಂಚಿನ ಆರಂಭ ಒದಗಿಸಿದ್ದರು. 10 ಓವರುಗಳ ನಂತರ 1 ವಿಕೆಟ್ಗೆ 87 ರನ್ ಸೇರಿಸಿ ಉತ್ತಮ ಸ್ಥಿತಿಯಲ್ಲಿತ್ತು.
ಈ ವೇಳೆ, ನಾಯಕ ರಶೀದ್ ಖಾನ್ (26ಕ್ಕೆ2) ಮತ್ತು ಸ್ಪಿನ್ ಜೊತೆಗಾರ ನೂರ್ ಅಹ್ಮದ್ (23ಕ್ಕೆ2) ಅವರು ನಿಖರ ದಾಳಿಯಿಂದ ಬಾಂಗ್ಲಾ ಬ್ಯಾಟರ್ಗಳ ಮೇಲೆ ಒತ್ತಡ ಹೇರಿದರು. ಕೊನೆಯ 10 ಓವರುಗಳಲ್ಲಿ 67 ರನ್ಗಳನ್ನಷ್ಟೇ ಕೊಟ್ಟರು.





