ಬನಾರಿ:ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರ ಸಭಾಭವನದಲ್ಲಿ ಅಗರಿ ಶ್ರೀನಿವಾಸ ಭಾಗವತ ವಿರಚಿತ ಶ್ರೀದೇವಿ ಮಹಾತ್ಮೆ ಪ್ರಸಂಗದಿಂದ ಆಯ್ದ “ಕದಂಬ ಕೌಶಿಕೆ” ಯಕ್ಷಗಾನ ತಾಳಮದ್ದಳೆ ನಡೆಯಿತು. ಆರಂಭದಲ್ಲಿ ಸ್ಥಳ ಸಾನ್ನಿಧ್ಯ ಶ್ರೀಗೋಪಾಲಕೃಷ್ಣ ದೇವರ ಪೂಜೆಯು ಭಗವದ್ಗೀತಾ ಪಾರಾಯಣದೊಂದಿಗೆ
ನೇರವೇರಿಸಲ್ಪಟ್ಟಿತು. ಪಾರಾಯಣದಲ್ಲಿ ಶಾಂತಾ ಕುಮಾರಿ ಚೆಂಡೆಮೂಲೆ, ಪೂಜಾ ಸಿ.ಯಚ್, ಈಶ್ವರಿ ಪೃಥ್ವಿ, ಕೀರ್ತಿ ಉಷಾ, ಪೂರ್ಣಿಮಾ ಬನಾರಿ ಭಾಗವಹಿಸಿದರು.
ಕಲಾಸಂಘದ ಹಿರಿಯ ಕಲಾವಿದರಾಗಿದ್ದ ಕೀರ್ತಿಶೇಷರಾದ ಕಲ್ಲರ್ಪೆ ಅಪ್ಪು ಪಾಟಾಳಿ ಮತ್ತು ಕಲ್ಲರ್ಪೆ ರಾಮ ಪಾಟಾಳಿ ಅವರ ಮಕ್ಕಳ ಪ್ರಾಯೋಜಕತ್ವದಲ್ಲಿ ಏರ್ಪಡಿಸಲಾಗಿದ್ದ ಈ ವಿಶೇಷ ಯಕ್ಷಗಾನ ಕಲಾರಾಧನೆಯ ಸಭಾ ಸಮಾರಂಭದಲ್ಲಿ ರಾಮಣ್ಣ ಮಾಸ್ತರ್ ದೇಲಂಪಾಡಿ ಅವರು ಅಪ್ಪು ಪಾಟಾಳಿ ಮತ್ತು ಕಲ್ಲರ್ಪೆ ರಾಮ ಪಾಟಾಳಿ ಅವರ ಸಂಸ್ಮರಣೆ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವವಿನೋದ ಬನಾರಿ,ಮಂಡೆಕ್ಕೋಲು ಅಪ್ಪಯ್ಯ ಮಣಿಯಾಣಿ, ಕಲ್ಲಡ್ಕ ಶಿವರಾಮ ಕಲ್ಲೂರಾಯ,ನಂದಕಿಶೋರ ಬನಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ನಡೆದ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಮೋಹನ ಮೆಣಸಿನಕಾನ, ನಿತೀಶ್ ಕುಮಾರ್ ಎಂಕಣ್ಣಮೂಲೆ, ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಅವರು ಭಾಗವಹಿಸಿದ್ದರು. ಚೆಂಡೆ, ಮದ್ದಳೆ, ಚಕ್ರತಾಳದಲ್ಲಿ ವಿಷ್ಣುಶರಣ ಬನಾರಿ, ಶ್ರಿಧರ ಆಚಾರ್ಯ ಈಶ್ವರಮಂಗಲ, ಶಾಂಭವಿ ಚೊಕ್ಕಾಡಿ ದಗ್ಗಲಡ್ಕ, ಶ್ರೀದೇವ್ ಆಚಾರ್ಯ, ಸದಾನಂದ ಮಯ್ಯಾಳ ಸಹಕರಿಸಿದರು. ಅರ್ಥಧಾರಿಗಳಾಗಿ ನಾರಾಯಣ ದೇಲಂಪಾಡಿ, ರಾಮಣ್ಣ ಮಾಸ್ತರ್ ದೇಲಂಪಾಡಿ, ಶಾಂಭವಿ ದಡ್ಡಾಲಡ್ಕ, ರಾಮನಾಯ್ಕ ದೇಲಂಪಾಡಿ, ನಾರಾಯಣ ಪಾಟಾಳಿ ಮಯ್ಯಾಳ, ಪದ್ಮನಾಭ ರಾವ್ ಮಯ್ಯಾಳ, ಬಿ.ಯಚ್. ವೆಂಕಪ್ಪ ಗೌಡ, ಸಂಜೀವ ರಾವ್ ಮಯ್ಯಾಳ, ರಮಾನಂದ ರೈ ದೇಲಂಪಾಡಿ ಭಾಗವಹಿಸಿದರು. ಕಲ್ಲರ್ಪೆ ಶೇಖರ ಪಾಟಾಳಿ ಸ್ವಾಗತಿಸಿದರು. ಕೃಷ್ಣ ಪಾಟಾಳಿ ಕೊಂದಲಕಾನ ವಂದಿಸಿದರು.












