ಬನಾರಿ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ ಸಂಸ್ಮರಣೆ – ಯಕ್ಷಗಾನ ತಾಳಮದ್ದಳೆ ʼ ನಡೆಯಿತು.ಸ್ಥಳ ಸಾನಿಧ್ಯ ಶ್ರೀ ಗೋಪಾಲಕೃಷ್ಣದೇವರಿಗೆ ವಿಶೇಷ ಪೂಜಾರ್ಚನೆ ಸಲ್ಲಿಸಲಾಯಿತು. ಶಾಂತಕುಮಾರಿ ದೇಲಂಪಾಡಿ, ಉಷಾಕಾವೇರಿ ಗುಡ್ಡಡ್ಕ, ಪೂರ್ಣಿಮಾ ಬನಾರಿ, ಈಶ್ವರಿ ಪೃಥ್ವಿ ಅವರು
ಭಗವದ್ಗೀತಾ ಪಾರಾಯಣವನ್ನು ನಡೆಸಿಕೊಟ್ಟರು.ಆನಂತರ ಪೂಜಾ ಸಿ ಎಚ್. ದೇಲಂಪಾಡಿ ಅವರ ನಿರೂಪಣೆಯೊಂದಿಗೆ ಆರಂಭಗೊಂಡ ಸಂಸ್ಮರಣೆ ಸಭೆಯಲ್ಲಿ ಜಯಂತಿ ಗುಂಡ್ಯಡ್ಕ ಪ್ರಾರ್ಥನಾಗೀತೆಯನ್ನು ಹಾಡಿದರು. ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಸ್ವಾಗತಿಸಿದರು.
ಕಲಾ ಸಂಘದ ಅಧ್ಯಕ್ಷ , ಹಿರಿಯ ಸಾಹಿತಿ ಡಾ.ರಮಾನಂದ ಬನಾರಿ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ವಿದ್ವಾಂಸ, ಅರ್ಥಧಾರಿ ವೆಂಕಟೇಶ್ ಕುಮಾರ್ ಉಳುವಾನ ಅವರು ಮಾತನಾಡುತ್ತಾ ಬನಾರಿ ಕಲಾ ಸಂಘದ ಚಟುವಟಿಕೆ, ನಿರಂತರತೆಯನ್ನು ಶ್ಲಾಘೀಸಿದರು. ಸಂಘದ ಹಿರಿಯ ಕಲಾವಿದ ಬೆಳ್ಳಿಪ್ಪಾಡಿ ಸದಾಶಿವ ರೈ ಕೀರ್ತಿಶೇಷ ಕೀರಿಕ್ಕಾಡು ಸುಬ್ರಹ್ಮಣ್ಯ ಭಟ್ಟರ ಸಂಸ್ಮರಣೆ ಮಾಡಿದರು. ಕಾರ್ಯಕ್ರಮವನ್ನು ಆಯೋಜಿಸಿದ ಕೀರಿಕ್ಕಾಡು ನಾರಾಯಣ ಭಟ್ ಬಾಳಿಲ ಅಭಿನಂದಿಸಿ ತನ್ನ ತೀರ್ಥರೂಪರ ಕಲಾ ಜೀವನದ ಪರಿಚಯಾತ್ಮಕ ಕೃತಿಯೊಂದನ್ನು ಪ್ರಕಟಿಸುವ ಯೋಜನೆಯನ್ನು ಸಭೆಯ ಮುಂದಿಟ್ಟರು.
ಬಳಿಕ ಭಾಗವತ ಗುರುಗಳಾದ ವಿಶ್ವವಿನೋದ ಬನಾರಿ ಅವರ ಸಂಯೋಜನೆಯಲ್ಲಿ ‘ಅತಿಕಾಯ ಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆ ಮೂಡಿಬಂತು.ಭಾಗವತಿಕೆಯಲ್ಲಿ ಮೋಹನ ಮೆಣಸಿನಕಾನ ಮತ್ತು ನಿತೀಶ್ ಕುಮಾರ್ ಎಂಕಣ್ಣಮೂಲೆ,ಚೆಂಡೆಮದ್ದಳೆ ವಾದಕರಾಗಿ ಕುಮಾರ ಸುಬ್ರಹ್ಮಣ್ಯ ಭಟ್ ವಳಕುಂಜ, ಮಂಡೆಕೂಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ನಾರಾಯಣ ಪಾಟಾಳಿ ಮಯ್ಯಾಳ, ಶ್ರೀ ಸ್ಕಂದ ದಿವಾಣ, ಕಲ್ಲಡ್ಕ ಶಿವರಾಮ ಕಲ್ಲೂರಾಯ, ಬಿ. ಎಚ್ ವೆಂಕಪ್ಪ ಗೌಡ ಭಾಗವಹಿಸಿದ್ದರು.ಅರ್ಥಧಾರಿಗಳಾಗಿ ಡಾ. ರಮಾನಂದ ಬನಾರಿ, ದಿವಾಣ ಶಿವ ಶಂಕರ ಭಟ್, ಡಾ. ಸೂರ್ಯನಾರಾಯಣ ಭಟ್ ಪುತ್ತೂರು, ವೆಂಕಟೇಶ್ ಕುಮಾರ್ ಉಳುವಾನ, ಕೀರಿಕ್ಕಾಡು ಗಣೇಶ್ ಶರ್ಮ, ಯಂ. ರಮಾನಂದ ರೈ ದೇಲಂಪಾಡಿ, ವೀರಪ್ಪ ಸುವರ್ಣ ನಡುಬೈಲು, ಐತಪ್ಪ ಗೌಡ ಮುದಿಯಾರು, ರಾಮ ನಾಯ್ಕ ದೇಲಂಪಾಡಿ ಭಾಗವಹಿಸಿದರು.
ಹಿರಿಯ ಯಕ್ಷಗಾನ ಕಲಾವಿದ ಬಾಲಕೃಷ್ಣ ಗೌಡ ದೇಲಂಪಾಡಿ, ಕಲಾರಾಧಕ ಗೋಪಾಲಯ್ಯ ಕೋಟಿಗದ್ದೆ, ಪದ್ಮಾನಾಭರಾವ್ ಮಯ್ಯಾಳ ಸಹಕರಿಸಿದರು. ನಂದ ಕಿಶೋರ ಬನಾರಿ ವಂದಿಸಿದರು.