ಬನಾರಿ:ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾ ಭವನದಲ್ಲಿ ದೇಲಂಪಾಡಿ ಮಹಾಲಿಂಗ ಪಾಟಾಳಿ – ಸೀತಮ್ಮ ದಂಪತಿಗಳ ಹೆಸರಲ್ಲಿ
ಪ್ರಥಮವಾಗಿ ಕೊಡಲ್ಪಡುವ ಸ್ಮೃತಿ ಗೌರವವನ್ನು ಖ್ಯಾತ ಹಿರಿಯ ಸಾಹಿತಿ ಅರ್ಥಧಾರಿ ಡಾ.ರಮಾನಂದ ಬನಾರಿ ಅವರಿಗೆ ನೀಡಿ ಗೌರವಿಸಲಾಯಿತು. ಮಹಾಲಿಂಗ ಪಾಟಾಳಿ ಅವರ 18ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದ
ಸಂದರ್ಭ ಹಿರಿಯ ಕಲಾರಾಧಕ ಅರ್ಥಧಾರಿ ನಿವೃತ್ತ ಪ್ರಾಧ್ಯಾಪಕ ರಾಮಣ್ಣ ಮಾಸ್ತರ್ ಅವರ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಸಾಹಿತಿ ಭಾಗವತ ನಾರಾಯಣ ತೋರಣಗಂಡಿ ಅವರು ಸಂಸ್ಮರಣಾ ಭಾಷಣ ಮಾಡಿದರು. ಯಕ್ಷಗಾನ ಕಲೋಪಾಸಕ ಯಂ.ರಮಾನಂದ ರೈ ಧನ್ಯವಾದ ಸಮರ್ಪಣೆ ಗೈದರು. ನಾರಾಯಣ ದೇಲಂಪಾಡಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಣೆ ಗೈದರು.ಮೊದಲಿಗೆ ಸ್ಥಳ ಸಾನ್ನಿಧ್ಯ ದೇವರ ಪೂಜಾರ್ಚನೆಯೊಂದಿಗೆ ಆರಂಭಗೊಂಡಿತು.
ಬಳಿಕ ತಾಳಮದ್ದಳೆ ಪಾರ್ತಿಸುಬ್ಬ ವಿರಚಿತ ’ಸೀತಾಪಹಾರ – ಜಟಾಯು ಮೋಕ್ಷ’ ಪ್ರಸಂಗ ಸಂಘದ ಹಿರಿಯ ಭಾಗವತ ಗುರುಗಳಾದ ವಿಶ್ವವಿನೋದ ಬನಾರಿ ನಿರ್ದೇಶನದಲ್ಲಿ ನಡೆಯಿತು. ರಚನಾ ಚಿದ್ಗಲ್ ಅವರ ಹಾಡುಗಾರಿಕೆಗೆ ಚೆಂಡೆ ಮದ್ದಳೆ ವಾದಕರಾಗಿ ಯಂ.ಅಪ್ಪಯ್ಯ ಮಣಿಯಾಣಿ. ಕೆ.ಶಿವರಾಮ ಕಲ್ಲೂರಾಯ, ವಿಷ್ಣುಶರಣ ಬನಾರಿ, ನಾರಾಯಣ ಪಾಟಾಳಿ ಮಯ್ಯಾಳ, ಕೃಷ್ಣಪ್ರಸಾದ ಬೆಳ್ಳಿಪ್ಪಾಡಿ ಮತ್ತು ಕುಮಾರಿ ಚೈತಾಲಿ ಕಾಂಚೋಡು ಅವರು ಸಹಕರಿಸಿದರು. ಅರ್ಥಧಾರಿಗಳಾಗಿ ಬಾಲಕೃಷ್ಣ ಗೌಡ ದೇಲಂಪಾಡಿ, ಮುದಿಯಾರು ಐತ್ತಪ್ಪ ಗೌಡ, ರಮಾನಂದ ರೈ ದೇಲಂಪಾಡಿ, ವೀರಪ್ಪ ಸುವರ್ಣ ಬೆಳ್ಳಿಪ್ಪಾಡಿ, ರಾಮನಾಯ್ಕ ದೇಲಂಪಾಡಿ, ಪದ್ಮನಾಭ ರಾವ್ ಮಯ್ಯಾಳ, ಭಾಸ್ಕರ ಮಾಸ್ತರ್ ದೇಲಂಪಾಡಿ ಅವರು ತಾಳಮದ್ದಳೆಯ ಯಶಸ್ಸಿಗೆ ಸಹಕರಿಸಿದರು. ನಂದಕಿಶೋರ ಬನಾರಿ ವಂದಿಸಿದರು.