ಸುಳ್ಯ:ಯೆನೆಪೋಯಾ ವಿದ್ಯಾಸಂಸ್ಥೆ ದೇರಳಕಟ್ಟೆ ಮಂಗಳೂರು ಇದರ ಎಮ್. ಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಂದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ಗ್ರಾಮೀಣ ಕ್ಯಾಂಪ್ ನಡೆಯಿತು. ಸ್ಥಳ ಸಾನ್ನಿದ್ಯ ಶ್ರೀ ಗೋಪಾಲಕೃಷ್ಣ ದೇವರ ಪೂಜಾರ್ಚನೆಯೊಂದಿಗೆ ಕಲಾ ಸಂಘದ ಅಧ್ಯಕ್ಷರು ಸಾಹಿತಿ, ಡಾ. ರಮಾನಂದ ಬನಾರಿ ಮಂಜೇಶ್ವರ ಅವರು ಶಿಬಿರದ
ಉದ್ಘಾಟನೆ ನೆರವೇರಿಸಿದರು. ದುಶ್ಚಟಗಳಿಂದ ದೂರವಿರುವಂತೆ ಮನೆ ಮನೆಗೆ ಸಾರಿ ಹೇಳುವ ಇಂತಹ ಗ್ರಾಮೀಣ ವಾಸ್ತವ್ಯ ಶಿಬಿರ ಅತ್ಯಂತ ಉಪಯುಕ್ತ ಎಂದು ಹೇಳಿದರು. ಶಿಬಿರದ ಪ್ರಮುಖ ಮೇಲ್ವಿಚಾರಕರಾದ ಡಾ.|ಮಹಮ್ಮದ್ ಗುತ್ತಿಗಾರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕಲಾ ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ತೊಡಗಿರುವ ಈ ಕೇಂದ್ರದ ಕಾರ್ಯ ಸ್ತುತ್ಯರ್ಹ ಎಂದು ಹೇಳಿದರು.
ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆ ರೂಪದಲ್ಲಿ ಸಂಘದ ಮಹಿಳಾ ಸದಸ್ಯೆಯರಿಂದ ಯಕ್ಷಗಾನ ಬೀಷ್ಮಾರ್ಜುನ ಪ್ರಸಂಗದ ಆಯ್ದ ಭಾಗಗಳನ್ನು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತು.
ಯೇನಪೋಯ ಮೆಡಿಕಲ್ ಕಾಲೇಜಿನ ನುರಿತ ವೈದ್ಯ ಸಮೂಹದಿಂದ ಉಚಿತ ವೈದ್ಯಕೀಯ ಶಿಬಿರ ನಡೆಸಿ ಕೊಡಲಾಯುತು. ಗ್ರಾಮೀಣ ಪ್ರದೇಶದ ಜನರ ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ನಳಿನಾಕ್ಷಿ ಹಾಗೂ ತಾಹಿರ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.ಕಲಾ ಸಂಘದ ಕಾರ್ಯದರ್ಶಿ ವಿಶ್ವ ವಿನೋದ ಬನಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು.