ಪ್ರತೀ ಅಪ್ಪ ಅಮ್ಮನ ಕನಸು…
“ತನ್ನ ಮಗು ಬೆಳೆಯಬೇಕು…
ಎಲ್ಲರೊಡನೆ ಬೆರೆಯಬೇಕು…
ಎಲ್ಲಾ ಕ್ಷೇತ್ರದಲ್ಲೂ ಹೆಸರು ಮಾಡಬೇಕು…
ಪ್ರತಿಭಾವಂತನಾಗಬೇಕು…
ಧೈರ್ಯಶಾಲಿಯಾಗಿರಬೇಕು…
ಆತ್ಮವಿಶ್ವಾಸ ಜೊತೆಗಿರಬೇಕು…
ನಗುನಗುತ್ತಾ ಖುಷಿಯಾಗಿರಬೇಕು…”
ಗ್ರಾಮೀಣ ಮಕ್ಕಳನ್ನು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಸಮಾಜಮುಖಿಯಾಗಿ ಬೆಳೆಸುವ ನಿಟ್ಟಿನಲ್ಲಿ ಹಾಗೂ
ಪ್ರತೀ ಮಗುವಿನಲ್ಲಿರುವ ಸುಪ್ತ ಪ್ರತಿಭೆಗೆ ಸೂಕ್ತ ತರಬೇತಿ ಕೊಟ್ಟು ಅವರಿಗೆ ವೇದಿಕೆಯನ್ನು ನಿರ್ಮಾಣ ಮಾಡಿ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಕಲಾವಿದರನ್ನು ಸಮಾಜಕ್ಕೆ ಕೊಟ್ಟ ಸುಳ್ಯದ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ
ರಂಗ ಮಯೂರಿ ಕಲಾಶಾಲೆ (ರಿ.) ಸುಳ್ಯ
ಗುಣಮಟ್ಟದ ತರಬೇತಿಗೆ, ವಿಭಿನ್ನ ಚಟುವಟಿಕೆಗಳಿಗೆ ಹೆಸರಾದ ಶಿಬಿರ ರಂಗಮಯೂರಿಯ ” ಬಣ್ಣ “
ಮಕ್ಕಳ ಶಿಬಿರ.
ಕಳೆದ ಆರು ವರ್ಷಗಳಿಂದ ಸುಳ್ಯದ ಇತಿಹಾಸ ಪ್ರಸಿದ್ಧ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸುಸಜ್ಜಿತ ಸಭಾಂಗಣದಲ್ಲಿ ನಡೆದುಕೊಂಡು ಬಂದಿದೆ. ಈ ವರ್ಷ ಮತ್ತೆ ಹೊಸತನದಲ್ಲಿ ಚಿಣ್ಣರ ನಗುವಿಗೆ, ನಲಿವಿನ ಸಂತೋಷಕ್ಕಾಗಿ ‘ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ರಾಜ್ಯಮಟ್ಟದ ರಂಗ ಶೈಲಿಯ ಬಣ್ಣ ಶಿಬಿರ ಅಭಿನಯದ ಜೊತೆಗೆ, ಭಾಷಾ ಪರಿಚಯಕ್ಕಾಗಿ ಕನ್ನಡ, ಅರೆಭಾಷೆ, ತುಳು, ಹಿಂದಿ, ಇಂಗ್ಲಿಷ್ ಭಾಷೆಯ ಮಕ್ಕಳ ನಾಟಕಗಳನ್ನು ವಿದ್ಯಾರ್ಥಿಗಳಿಗೆ ರಾಜ್ಯದ ಹೆಸರಾಂತ ರಂಗತರಬೇತುದಾರರಿಂದ ತರಬೇತಿ ಕೊಡಿಸಿ ಪ್ರತೀ ವಿದ್ಯಾರ್ಥಿಗೆ ವೇದಿಕೆ ಕಲ್ಪಿಸಿ ಅವರಲ್ಲಿನ ಅಂಜಿಕೆ, ಅಳುಕು ಹೋಗಲಾಡಿಸಿ, ಆತ್ಮವಿಶ್ವಾಸ ತುಂಬುವ ಕೆಲಸಕ್ಕೆ ಕೈ ಹಾಕಿದ್ದೇವೆ.

ಎಂದಿನಂತೆ ನಿಮ್ಮ ಪ್ರೀತಿ, ಪ್ರೋತ್ಸಾಹ, ಸಹಕಾರದ ಜೊತೆಗೆ ನೀವೂ ನಮ್ಮೊಂದಿಗೆ ಇರಬೇಕು
ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ತಮಗೆ ಆತ್ಮೀಯ ಸ್ವಾಗತ…
ನಿಮ್ಮ ಮನೆಯ ಮಕ್ಕಳನ್ನು ನಮ್ಮ ಮನೆಯ ಮಕ್ಕಳಂತೆಯೇ ನೋಡಿಕೊಳ್ಳುತ್ತೇವೆ ಎನ್ನುವ ಭರವಸೆಯೊಂದಿಗೆ
ನಿಮ್ಮ ಮಗುವಿನ ನಗುವಿನಲ್ಲಿ ನಾವೂ ಖುಷಿಯನ್ನು ಕಾಣುತ್ತೇವೆ.
ಮಕ್ಕಳ ಪ್ರಪಂಚ ಸುಖವಾಗಿರಲಿ…
ಬಾಲ್ಯ ಸಮೃದ್ಧವಾಗಿರಲಿ…
ಆದಷ್ಟು ಎಲ್ಲಾ ಪೋಷಕರಿಗೆ, ಮಕ್ಕಳಿಗೆ ತಿಳಿಸಿ, ಶೇರ್ ಮಾಡಿ… ಎನ್ನುತ್ತಾ ರಂಗಮಯೂರಿ ಕುಟುಂಬ ತಮಗೆಲ್ಲರಿಗೂ ಸ್ವಾಗತ ಕೋರುತ್ತದೆ.
ಬಣ್ಣ ಆಕರ್ಷಕ ಮಕ್ಕಳ ಶಿಬಿರ ಏಪ್ರಿಲ್12ರಿಂದ ಏಪ್ರಿಲ್ 20ರ ವರೆಗೆ. ಸ್ಥಳ ಕಾಯರ್ತೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ.
7 ರಿಂದ 17 ವರ್ಷ ವಯಸ್ಸಿನವರಿಗೆ ಅವಕಾಶ.
ಬಣ್ಣ -2025 ರ ಪ್ರವೇಶಾತಿ ಅರ್ಜಿಗಳು ಸುಳ್ಯದ ಸುದ್ದಿಬಿಡುಗಡೆ ಆಫೀಸ್ ಹಾಗೂ ರಂಗ ಮಯೂರಿಯಲ್ಲಿ ದೊರೆಯುತ್ತದೆ. ಕೂಡಲೇ ನೋಂದಾಯಿಸಿಕೊಳ್ಳಿ
