ಸುಳ್ಯ: ಹರಿಹರ ಪಲ್ಲತ್ತಡ್ಕ ಗ್ರಾಮದ ಬಾಳುಗೋಡಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಫೆ. ಚಾಲನೆ ನೀಡಿದರು. ಬಾಳುಗೋಡು ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು. ರೂ 27 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಬಾಳುಗೋಡಿನ ದ.ಕ. ಜಿಲ್ಲಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಶಾಸಕರು ನೆರವೇರಿಸಿದರು. ಬಾಳುಗೋಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುವ

ಬಿಎಸ್ಎನ್ಎಲ್ ಮೊಬೈಲ್ ಟವರ್ ಕಾಮಾಗಾರಿಗೆ ಚಾಲನೆ ನೀಡಲಾಯಿತು.ಬಾಳುಗೋಡಿನ ಉಪ್ಪುಕಳ ಹೊಳೆಗೆ ಗ್ರಾಮಸೇತು ಬಂಧ ಯೋಜನೆಯಡಿಯಲ್ಲಿ ನಿರ್ಮಾಣವಾದ ರೂ 47ಲಕ್ಷ ವೆಚ್ಚದ ಸೇತುವೆ ಲೋಕಾರ್ಪಣೆ ಮಾಡಲಾಯಿತು. ನಂತರ ಬಾಳುಗೋಡು ಗ್ರಾಮದ ಕಾಂತುಕುಮೇರಿ ಎಂಬಲ್ಲಿ 50 ಲಕ್ಷದ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟನೆ ನೆರವೇರಿಸಿದರು. ಬಾಳುಗೋಡು ಗ್ರಾಮ ವ್ಯಾಪ್ತಿಯ ಕಾರ್ಗೊಡು ಎಂಬಲ್ಲಿ ಗ್ರಾಮಸೇತು ಬಂಧ ಯೋಜನೆಯಡಿಯಲ್ಲಿ ನಿರ್ಮಾಣವಾದ 10 ಲಕ್ಷ ವೆಚ್ಚದ ಸೇತುವೆ ಲೋಕಾರ್ಪಣೆ ಮಾಡಲಾಯಿತು.

ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಅಙಣ, ಉಪಾಧ್ಯಕ್ಷ ಜಯಂತ ಬಾಳುಗೋಡು, ಗ್ರಾಮ ಪಂಚಾಯತ್ ಸದಸ್ಯರಾದ ಬಿಂದು ಗುಂಡಿಹಿತ್ಲು, ಶಿಲ್ಪಾ ಕೊತ್ನಡ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶೀತಲ್, ಕುಶಾಲಪ್ಪ ಟಿ, ಪ್ರಮುಖರಾದ ಡಾ.ಸೋಮಶೇಖರ ಕಟ್ಟೆಮನೆ, ದಿನೇಶ್ ಕಿರಿಭಾಗ, ರಾಧಾಕೃಷ್ಣ ಕಟ್ಟೆಮನೆ, ಚಂದ್ರಹಾಸ ಶಿವಾಲ, ಅಜಯ ಪೊಯ್ಯಮಜಲು, ಸೀತಾರಾಮ ಕಟ್ಟೆಮನೆ, ಪ್ರೇಮಾ ಸೀತಾರಾಮ ಕಟ್ಟೆಮನೆ, ಪದ್ನಯ್ಯ ಮಾಸ್ತರ್ ಕಟ್ಟೆಮನೆ, ಮನೋರಂಜಿತಾ ಮತ್ತಿತರರು ಉಪಸ್ಥಿತರಿದ್ದರು.







