ಸುಳ್ಯ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಚೊಕ್ಕಾಡಿ ಶ್ರೀ ಭಗವಾನ್ ಸತ್ಯಸಾಯಿ ಪ್ರೌಢ ಶಾಲೆಯಲ್ಲಿ ನಡೆದ ಪ್ರೌಢ ಶಾಲಾ ವಿಭಾಗದ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕ ಪ್ರಥಮ
ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕರ ತಂಡದಲ್ಲಿ ಮನ್ವಿತ್ ಎಂ.ಪಿ, ನಿತೇಶ್ ಬಿ, ದುರ್ಗಾಪ್ರಸಾದ್, ಯಶ್ವಿತ್ ಕೆ, ಯಶ್ವಿತ್ ಜೆ.ಯು, ಅಭಿಲಾಷ್ ಎ, ಪುನೀತ್ರಾಜ್ ಆಡಿದ್ದರು.
ಬಾಲಕಿಯರ ತಂಡದಲ್ಲಿ ರಚಿತ ಎಂ.ಪಿ, ಹಸ್ತಾ ಕೆ.ಎಂ, ಶ್ರೀಹಸ್ತಾ ಕೆ.ಎಸ್. ದೀಪ್ತಿ, ವರ್ಷಿತಾ ಜಿ, ಹರ್ಷಿತಾ ಕೆ, ರೇಣುಕಾ ಎನ್ ಭಾಗವಹಿಸಿದ್ದರು.