ಅರಂತೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸುಳ್ಯ ತಾಲೂಕು, ಶ್ರೀ ಮಂಜುನಾಥೇಶ್ವರ ಭಜನಾ ಪತಿಷತ್ ಸುಳ್ಯ ತಾಲೂಕು, ಭಜನೋತ್ಸವ ಸಮಿತಿ ಸಂಪಾಜೆ ವಲಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಭಜನೋತ್ಸವ ಮತ್ತು ಭಜಕರ ಸಂವಾದ ಕಾರ್ಯಕ್ರಮ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಭಜನೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.ಭಜನೋತ್ಸವದಂತಹ
ಕಾರ್ಯಕ್ರಮಗಳು ಧರ್ಮದಲ್ಲಿ ಜಾಗೃತಿ ಮಾಡಲಿದೆ. ಸಾಂಸಾರಿಕವಾಗಿ ಐಕ್ಯತೆಗೆ ಮನೆ ಮನೆಗಳಲ್ಲಿ ಭಜನೆಯಾಗಬೇಕು. ಸಮಾಜವನ್ನು ಶುದ್ದೀಕರಿಸಲು ಭಜನೆ ಪೂರಕವಾಗಿದೆ ಎಂದರು. ಭಜನೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಶಾಸಕಿ ಭಾಗೀರಥಿ ಮುರುಳ್ಯ,ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,
ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ,
ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ತೊಡಿಕಾನ ವ್ಯ. ಸೇ. ಸ.ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನಿಕಟ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಯು.ಎಂ, ಮಂಜುನಾಥೇಶ್ವರ ಭಜನಾ ಪರಿಷತ್ ನಿರ್ದೇಶಕ ಸೋಮಶೇಖರ ಪೈಕ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ರತ್ನಾವತಿ ಅಳಿಕೆ, ರಾಮಚಂದ್ರ ಕಲ್ಲಗದ್ದೆ, ಯೋಜನಾಧಿಕಾರಿ ಮಾಧವ ಗೌಡ ಉಪಸ್ಥಿತರಿದ್ದರು. ದೀಪ್ತಿ ಪ್ರಾರ್ಥಿಸಿದರು.ಸುಳ್ಯ ಯೋಜನಾಧಿಕಾರಿ ಮಾಧವ ಗೌಡ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ ವಂದಿಸಿದರು.ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನೆಗೆ ಮುನ್ನ ಭಜಕರ ಮೆರವಣಿಗೆಯುಶ್ರೀ ದುರ್ಗಾಮಾತಾ ಭಜನಾ ಮಂದಿರ ಅರಂತೋಡಿನಿಂದ ನೆಹರು ಸ್ಮಾರಕ ಪದವಿ ಪೂರ್ವಕಾಲೇಜು ಸಭಾಂಗಣದ ನಡೆಯಿತು. ಹಿರಿಯರಾದ ಕೆ.ಆರ್. ಪದ್ಮನಾಭ ಮೆರವಣಿಗೆಗೆ ಚಾಲನೆ ನೀಡಿದರು.