ಸುಳ್ಯ:ಕಳೆದ 25 ವರ್ಷಗಳಲ್ಲಿ ಭಗವತಿ ಯುವ ಸೇವಾ ಸಂಘದ ಸಾಧನೆ, ಸೇವಾ ಕಾರ್ಯವು ಸಮಾಜಕ್ಕೆ ಮಾದರಿಯಾಗಿದೆ ಎಂದು
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ಬಂಟರ ಯಾನೆ ನಾಡವರ ಸಂಘದ ಸಭಾಭವನದಲ್ಲಿ ನಡೆಯುತ್ತಿರುವ
ಬೂಡು-ಕೇರ್ಪಳ- ಕುರುಂಜಿಗುಡ್ಡೆ ಭಾಗದಲ್ಲಿ ಕ್ರಿಯಾಶೀಲರಾಗಿರುವ ಶ್ರೀ ಭಗವತಿ ಯುವ ಸೇವಾ ಸಂಘದ ಅದ್ದೂರಿ ಬೆಳ್ಳಿ ಹಬ್ಬ ಸಮಾರಂಭ ‘ಶ್ರೀಭಗವತಿ ರಜತೋತ್ಸವ ಕಾರ್ಯಕ್ರಮವನ್ನು
ಉದ್ಘಾಟಿಸಿ ಅವರು ಮಾತನಾಡಿದರು.ಸಂಘವು ಸಮಾಜ ಸೇವೆಯ ಅನನ್ಯ ಕೊಡುಗೆಯ ಮೂಲಕ ಸಾರ್ಥಕ ಬೆಳ್ಳಿ ಹಬ್ಬವನ್ನು ಆಚರಿಸುತಿದೆ. ಕ್ರೀಡಾಕೂಟದ ಮೂಲಕ ಕ್ರೀಡಾ ಪಟುಗಳನ್ನು ಸೃಷ್ಠಿಸಿದ, ಸೇವಾ ಕಾರ್ಯದ ಮೂಲಕ ಸಮಾಜಕ್ಕೆ ಶಕ್ತಿ ತುಂಬಿದ ಸಂಘಟನೆ ಧಾರ್ಮಿಕ ಹಾಗೂ ರಾಷ್ಟ್ರೀಯ ಸೇವಾ ಮನೋಭಾವದೊಂದಿಗೆ ಸುಂದರ ಸಮಾಜದ ನಿರ್ಮಾಣದಲ್ಲಿ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದು ಅವರು ಹಾರೈಸಿದರು.

ಭಗವತಿ ಯುವ ಸೇವಾ ಸಂಘವು 25 ವರ್ಷ ಪೂರೈಸಿದ ಹಿನ್ನಲೆಯಲ್ಲಿ
ಬಂಟರ ಯಾನೆ ನಾಡವರ ಸಂಘ ಸುಳ್ಯ ತಾಲೂಕು ಇದರ ಸಹಕಾರದೊಂದಿಗೆ ನಡೆಯುವ ಎರಡು ದಿನಗಳ ಅದ್ದೂರಿ ಬೆಳ್ಳಿಹಬ್ಬದ ಆಚರಣೆ ಪ್ರಯುಕ್ತ ಭಗವತಿ ರತ್ನ ಭೂಷಣ ಪ್ರಶಸ್ತಿಯನ್ನು
ವೈಯುಕ್ತಿಕ ನೆಲೆಯಲ್ಲಿ ಎನ್.ಎ.ರಾಮಚಂದ್ರ ಹಾಗೂ ಎನ್.ಜಯಪ್ರಕಾಶ್ ರೈ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಸಂಘಟನೆಯ ನೆಲೆಯಲ್ಲಿ ಪಯಸ್ವಿನಿ ಯುವಕ ಮಂಡಲ ಕೇರ್ಪಳ, ಸ್ಪಂದನ ಗೆಳೆಯರ ಬಳಗ ಅಡ್ತಲೆ, ಅರಂತೋಡು,
ಮಿತ್ರ ಬಳಗ ಕಾಯರ್ತೋಡಿ ಸಂಘಟನೆಗಳಿಗೆ ಶ್ರೀ ಭಗವತಿ ರತ್ನ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಸುಳ್ಯ ಸಾರ್ವಜನಿಕ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು, ಶ್ರೀ ಚೆನ್ನಕೇಶವ ದೇವಸ್ಥಾನದ
ಪ್ರಧಾನ ಅರ್ಚಕ ಹರಿಕೃಷ್ಣ ವರಂಬಳಿತ್ತಾಯ,ರಕ್ತದಾನಿ
ಶರತ್ ಪರಿವಾರಕಾನ,ಹಿರಿಯ ದೈವ ನರ್ತಕ ಮಾಯಿಲ ಅಜಿಲ,ಪ್ರಗತಿ ಅಂಬ್ಯುಲನ್ಸ್ನ ಚಾಲಕ ಅಬ್ದುಲ್ ರಜಾಕ್ (ಅಚ್ಚು),ಹಿರಿಯ ಯಕ್ಷಗಾನ ಪೋಷಕರು ಮತ್ತು ಕಲಾವಿದ ಬಾಲಣ್ಣ ಗೌಡ ಕಾಪಿಲ, ಕೇರ್ಪಳ, ನಿವೃತ್ತ ಅಂಗನವಾಡಿ ಸಹಾಯಕಿ ಕುಸುಮಾವತಿ,ವಾಲಿಬಾಲ್ ಆಟಗಾರ ವಿಪುಲ್ ರೈ ಬೂಡು,ಅವರನ್ನು ಸನ್ಮಾನಿಸಲಾಯಿತು.

ಶ್ರೀ ಭಗವತಿ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಕೇರ್ಪಳ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ಗೌರವಾಧ್ಯಕ್ಷ ಎನ್. ಜಯಪ್ರಕಾಶ್ ರೈ,
ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಶಾರದಾಂಬಾ ಉತ್ಸವ ಸಮಿತಿಯ ಕೋಶಾಧಿಕಾರಿ ಅಶೋಕ್ ಪ್ರಭು, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಡಂಗಾಯ, ಜಿ.ಪಂ.ಮಾಜಿ ಸದಸ್ಯ
ಹರೀಶ್ ಕಂಜಿಪಿಲಿ, ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ

ಅಧ್ಯಕ್ಷ ಸುಭಾಶ್ಚಂದ್ರ ರೈ ತೋಟ,ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಹೇಮಂತ್ ಕಾಮತ್, ಸಿಎ ಬ್ಯಾಂಕ್ ನಿರ್ದೇಶಕ
ಎನ್.ಎ. ರಾಮಚಂದ್ರ, ಶ್ರೀ ಭಗವತಿ ಯುವ ಸೇವಾ ಸಂಘದ ಗೌರವಾಧ್ಯಕ್ಷ ಬೂಡು ರಾಧಾಕೃಷ್ಣರೈ, ಸ್ಥಾಪಕಾಧ್ಯಕ್ಷ ಸದಾಶಿವ ಕೆ. (ಮೆಸ್ಕಾಂ),ಮಾಜಿ ಅಧ್ಯಕ್ಷ ಶಿವರಾಮ ಕೇರ್ಪಳ, (ಕೆ.ವಿ.ಜಿ.ಪಿ.), ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ನಿವೃತ್ತ ಅಧಿಕಾರಿ ಜನಾರ್ಧನ ನಾಯ್ಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ಎನ್.ಆರ್.ರಂಜಿತ್, ಬೂಡು ಕಾಲನಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೂಡು ಭಾಗವಹಿಸಿದ್ದರು.
ಭಗವತಿ ಯುವ ಸೇವಾ ಸಂಘದ ಗೌರವಾಧ್ಯಕ್ಷ ಬೂಡು ರಾಧಾಕೃಷ್ಣರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಪೂರ್ತಿ ಎಂ.ರೈ ಹಾಗೂ ಯುಕ್ತಿ ಎಂ.ರೈ ಪ್ರಾರ್ಥಿಸಿದರು.ರಾಜೇಶ್ ಕುರುಂಜಿಗುಡ್ಡೆ ವಂದಿಸಿದರು. ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಸಂಭ್ರಮ:
ಎರಡು ದಿನಗಳ ಕಾಲ ನಡೆಯುವ ವೈವಿಧ್ಯಮಯ ಸಾಂಸ್ಕೃತಿಕ ಸಂಭ್ರಮದ ಅಂಗವಾಗಿ ಮಾ.28ರಂದು ರಾತ್ರಿ ಬೂಡು ಕಿಶೋರ್ ಕುಮಾರ್ ಶೆಟ್ಟಿ ನೇತೃತ್ವದ ಖ್ಯಾತ ನೃತ್ಯ ತಂಡ ಎಕ್ಸ್ ಟೆಸಿ ವತಿಯಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ. ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನವೈಭವ ನಡೆಯಿತು.











