ಎಲಿಮಲೆ: ಬದ್ರಿಯಾ ಜಮಾಅತ್ ಕಮಿಟಿ ಎಲಿಮಲೆ ಇದರ ಮಹಾಸಭೆಯು ದಿನಾಂಕ ಮದ್ರಸಾ ವಠಾರದಲ್ಲಿ ಅಧ್ಯಕ್ಷರಾದ ಐ ಕೆ ಮಹಮ್ಮದ್ ಇಖ್ಬಾಲ್ ಎಲಿಮಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಲಿಮಲೆ ಮುದರ್ರಿಸರಾದ ಅಹಮದ್ ರಿಫಾಯಿ ತಂಙಳ್ ಮಾವೂರು ಕೋಝಿಕ್ಕೋಡ್ ಅವರು
ದುಆ ನೆರವೇರಿಸಿದರು. ಹೈದರ್ ಹಾಜಿ ಬಟ್ರಬೈಲ್ ವರದಿ ವಾಚಿಸಿ, ಪ್ರಧಾನ ಕಾರ್ಯದರ್ಶಿ ಹನೀಫ್ ಮೆತ್ತಡ್ಕ ಲೆಕ್ಕ ಪತ್ರ ಮಂಡಿಸಿದರು. ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆದು ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

(ಅಧ್ಯಕ್ಷ ಅಬ್ದುಲ್ ಖಾದರ್ ಪಾಣಾಜೆ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ .ಪಿ.ಎ.ಎಲಿಮಲೆ, ಕೋಶಾಧಿಕಾರಿ ಇಬ್ರಾಹಿಂ ಜೀರ್ಮುಕ್ಕಿ)
ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಪಾಣಾಜೆ, ಉಪಾಧ್ಯಕ್ಷರಾಗಿ ಮಹಮೂದ್ ಸಖಾಫಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ .ಪಿ.ಎ.ಎಲಿಮಲೆ, ಕೋಶಾಧಿಕಾರಿಯಾಗಿ ಇಬ್ರಾಹಿಂ ಜೀರ್ಮುಕ್ಕಿ ಹಾಗೂ ಸದಸ್ಯರಾಗಿ ಅಬ್ದುಲ್ಲಾ ಜಿ. ಎಸ್, ಸೂಫಿ ಮುಸ್ಲಿಯಾರ್, ಅಹಮದ್ ಕುಂಞಿ, ಜುನೈದ್ ಸಖಾಫಿ, ಫೈಝಲ್ ಜೀರ್ಮುಕ್ಕಿ, ಅಬ್ದುಲ್ಲಾ ಜಿ ಎ ಕೆ, ನಿಯಾಝ್ ವೈ ಎಚ್ ಆಯ್ಕೆಯಾದರು. ಮಹಮೂದ್ ಮುಸ್ಲಿಯಾರ್ ದೊಡ್ಡಂಗಡಿ ವಂದಿಸಿದರು.









